- ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಈ ವರ್ಷಾಂತ್ಯದ ವೇಳೆಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ, ಹಾಗೂ ಹೊಸ ಮತ್ತು ವಿಸ್ತರಿತ ದ್ವಿಪಕ್ಷೀಯ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಗೆ ಒಪ್ಪಿಗೆಯನ್ನು ನೀಡಿದ್ದಾರೆ.
- ಇದೇ ವೇಳೆ ಮೋದಿ ಹಾಗೂ ಜಾನ್ಸನ್ ಒಟ್ಟಾರೆ ಸಂಬಂಧಗಳಿಗೆ ಹೊಸ ವೇಗವನ್ನು ನೀಡಲು ಸಿದ್ದರಾಗಿದ್ದಾರೆ, ಅನೇಕ ವಲಯಗಳಲ್ಲಿ ಆಳವಾದ ಸಹಯೋಗಕ್ಕಾಗಿ ಉತ್ತಮ ಗುರಿಗಳನ್ನು ಪಟ್ಟಿ ಮಾಡಿರುವ ಮಾರ್ಗಸೂಚಿ 2030 ರ ಅನುಷ್ಠಾನದಲ್ಲಿ ಮಾಡಿರುವ ಪ್ರಗತಿಯ ಬಗ್ಗೆ ಪರಿಶೀಲನೆಯನ್ನು ನಡೆಸಿದರು. ಇದೀಗ ಭಾರತ-ಯುಕೆ ದೇಶಗಳು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿಕೆ ನೀಡಿವೆ.
- ಇದೆಲ್ಲದರ ನಡುವೆ ಇಂಡೋ-ಪೆಸಿಫಿಕ್ನಲ್ಲಿ ಮುಕ್ತ,ಅಂತರ್ಗತ ಹಾಗೂ ನಿಯಮಾಧಾರಿತ ಆದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ. ಇದೇ ಸಂಧರ್ಭದಲ್ಲಿ ಇನ್ನಿತರ ದೇಶಗಳಲ್ಲಿ ಭಯೋತ್ಪಾದನೆಯನ್ನು ಹರಡಲು ಅಫ್ಘಾನ್ ದೇಶವನ್ನು ಬಳಕೆ ಮಾಡದಿರುವುದು ಅಗತ್ಯವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಉಕ್ರೇನ್ ಬಿಕ್ಕಟ್ಟಿನ ಕುರಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮೋದಿಯವರ ಮಾತುಕತೆ ಹಾಗೂ ರಾಜತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ, ಇದರಿಂದಾಗಿ ಅಲ್ಲಿನ ಕದನಕ್ಕೆ ಸ್ವಲ್ಪ ಮಟ್ಟಿಗೆ ವಿರಾಮಕ್ಕೆ ಕರೆ ನೀಡಿದ್ದಾರೆ.
- ಇತ್ತೀಚಿಗಿನ ಶೃಂಗಸಭೆಯಲ್ಲಿ ವ್ಯಾಪಾರ ಹಾಗೂ ಆರ್ಥಿಕತೆ, ರಕ್ಷಣೆ, ಭದ್ರತೆ, ಹವಾಮಾನ ಬದಲಾವಣೆ ಹಾಗೂ ಇನ್ನಿತರ ಜನರ ನಡುವಿನ ಸಂಪರ್ಕಗಳ ಪ್ರದೇಶಗಳಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಉಭಯ ಪಕ್ಷಗಳು 10 ವರ್ಷಗಳ ಸುದೀರ್ಘ ಮಾರ್ಗಸೂಚಿಯನ್ನು ಅಳವಡಿಸಿಕೊಡಿವೆ ಎನ್ನಲಾಗಿದೆ
Subscribe to Updates
Get the latest creative news from FooBar about art, design and business.