2022ರ ಭಾರತೀಯ ನ್ಯಾಯಾಂಗ ವರದಿ ಬಿಡುಗಡೆಯಾಗಿದ್ದು ನ್ಯಾಯದಾನದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.
ತಮಿಳುನಾಡು, ತೆಲಂಗಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.
ದೇಶಾದ್ಯಂತ ಸಾರ್ವಜನಿಕರಿಗೆ ನ್ಯಾಯದಾನ ಒದಗಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ಐದು ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿವೆ ಎಂದು ಇಂಡಿಯಾ ಜಸ್ಟಿಸ್ ರಿಪೋರ್ಟ್ (ಐಜೆಆರ್) 2022 ರಲ್ಲಿ ತಿಳಿಸಿದೆ.