* ಭಾರತವು ಡಿಸೆಂಬರ್ 1 ರಿಂದ 2023 ರ ನವೆಂಬರ್ 30 ರವರೆಗೆ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಲಿದೆ, ಭಾರತ ಈ ಸಮಯದಲ್ಲಿ ಜಿ-20 ಗೆ ಸಂಬಂಧಿಸಿದ 200 ಸಭೆಗಳನ್ನು ಆಯೋಜಿಸುವ ಗುರಿ ಹೊಂದಿದೆ.
* ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸುವ ಪ್ರಕಾರ ಜಿ-20 ನಾಯಕರ ಶೃಂಗಸಭೆಯು 2023 ರ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ.
* ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಸೇರಿಕೊಂಡು ಟ್ರೋಯಿಕಾ ವೇದಿಕೆಯನ್ನು ರಚಿಸಿಕೊಳ್ಳುತ್ತಿದ್ದು, ಈ ವೇದಿಕೆಯು ಜಿ-20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ್ದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ದೇಶಗಳ ಅಂತರ್ಸರ್ಕಾರಿ ವೇದಿಕೆಯಾಗಿದೆ.