* ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ರೈಲ್ವೆ ಅತಿ ಉದ್ದದ ಸರಕು ರೈಲು ‘ವಾಸುಕಿ’ ಹೊಸ ದಾಖಲೆ ನಿರ್ಮಿಸಿದೆ.
* ಈ ಸರಕು ಸಾಗಣೆ ರೈಲು ‘ವಾಸುಕಿ’ ಸುಮಾರು 3.5 ಕಿ.ಮೀ ಉದ್ದದ ಐದು ರೇಕ್ ಗಳನ್ನು ಒಂದೇ ಯುನಿಟ್ನ್ನಾಗಿ ಮಾಡಿಕೊಂಡು ಭಿಲಾಯ್ನಿಂದ ಕೊರ್ಬಾ ವರೆಗೆ 224 ಕಿ.ಮೀ ಸಂಚರಿಸುವ ಮೂಲಕ ‘ವಾಸುಕಿ’ ರೈಲು ಹೊಸ ಇತಿಹಾಸ ನಿರ್ಮಿಸಿದೆ.
* ಈ ರೈಲನ್ನು ಕಲ್ಲಿದ್ದಲು ಸಾಗಣೆ ಮಾಡಲು ಬಳಸಲಾಗುತ್ತಿದ್ದು ಮತ್ತು ಅತೀ ವೇಗವಾಗಿ ಸಂಚರಿಸುವ ರೈಲು ಇದಾಗಿದೆ.
* ವಾಸುಕಿ ರೈಲು ಸುಮಾರು 5 ಸರಕು ಸಾಗಣೆ ರೈಲಿಗೆ ಸರಿಸಮನಾಗುವ 300 ಬೋಗಿಗಳನ್ನು ಒಂದೇ ಬಾರಿಗೆ ಹೊತ್ತೊಯ್ದಿದ್ದು, ಒಬ್ಬನೇ ಪೈಲಟ್, ಓರ್ವ ಲೊಕೋ ಪೈಲಟ್ ಹಾಗೂ ಓರ್ವ ಗಾರ್ಡ್ ಇದರಲ್ಲಿದ್ದರು.
* ಸೂಪರ್ ಅನಕೊಂಡ ಎಂಬ ರೈಲು 2 ಕಿ.ಮೀ ಉದ್ದದ ಬೋಗಿಗಳಲ್ಲಿ ಸರಕುಗಳನ್ನು ಹೊತ್ತೊಯ್ದು, ಬಳಿಕ ಇತ್ತೀಚಿನ ಡಿಪಿಸಿಎ ತಂತ್ರಜ್ಞಾನ ಬಳಸಿ ಮೂರು ಸರಕು ರೈಲುಗಳನ್ನು ಜೊತೆ ಮಾಡಲಾಗಿದೆ.
Subscribe to Updates
Get the latest creative news from FooBar about art, design and business.