* ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಬೆಂಗಳೂರಿನ ಮಹೇಶ್ ಕಾಕಡೆ ಮತ್ತು ಮಾನವಿಕ ಕ್ಷೇತ್ರದಲ್ಲಿ ಪ್ರೊ.ಸುಧೀರ್ ಕೃಷ್ಣಸ್ವಾಮಿ ಸೇರಿ ಆರು ಜನರು ಇಸ್ಫೋಸಿಸ್ ಸೈನ್ಸ್ ಫೌಂಡೇಶನ್ ಕೊಡ ಮಾಡುವ ಪ್ರತಿಷ್ಠಿತ ‘2022ರ ಇಸ್ಫೋಸಿಸ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
* ಇಸ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ಫೌಂಡೇಶನ್ ಟ್ರಸ್ಟಿಗಳು ಮಂಗಳವಾರ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದರು.
* ‘ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್’ನಲ್ಲಿ ಐಐಟಿ ಖರಗಪುರದ ಸುಮನ್ ಚಕ್ರವರ್ತಿ, ‘ಜೀವ ವಿಜ್ಞಾನ’ ಕ್ಷೇತ್ರದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ ಸಂಸ್ಥೆಯ ನರಜೈವಿಕ ಶಾಸ್ತ್ರಜ್ಞೆ ವಿದಿತಾ ವೈದ್ಯ ಆಯ್ಕೆಯಾಗಿದ್ದಾರೆ.
* ‘ಭೌತ ವಿಜ್ಞಾನ’ ವಿಭಾಗದಲ್ಲಿ ಪುಣೆ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಅಸ್ಟೊ್ರೕನಾಮಿ ವಿಭಾಗದ ನಿಸ್ಸೀಮ್ ಕಾನೇಕರ್, ‘ಸಮಾಜ ವಿಜ್ಞಾನ’ ವಿಭಾಗದಲ್ಲಿ ಅಮೆರಿಕದ ಯೇಲ್ ಯುನಿವರ್ಸಿಟಿಯ ರೋಹಿಣಿ ಪಾಂಡೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಪುರಸ್ಕಾರವು 1 ಲಕ್ಷ ಡಾಲರ್, ಚಿನ್ನದ ಪದಕ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಜನವರಿ ಮಾಸಾಂತ್ಯದಲ್ಲಿ ನಗರದ ಲೀಲಾವತಿ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿಗಳು ತಿಳಿಸಿದರು.
* ಮಹೇಶ್ ಕಾಕಡೆ ಅವರು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು, ಬೀಜಗಣಿತ ಸಂಖ್ಯಾಸೂತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ನೀಡಿರುವ ಸೂತ್ರ ಗೂಢಲಿಪಿ ಶಾಸ್ತ್ರದಲ್ಲಿ ಹೆಚ್ಚಿನ ಬಳಕೆ ಆಗುತ್ತಿದೆ.
* ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರಿಗೆ 1973 ರಲ್ಲಿ ಸುಪ್ರೀಂ ಕೋರ್ಟ ರೂಪಿಸಿದ ‘ಸಂವಿಧಾನದ ಮೂಲಸ್ವರೂಪ’ ತಾತ್ವಿಕತೆ ಕುರಿತ ಬರವಣಿಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.
* ಈ ಬಾರಿ ಒಟ್ಟೂ 218 ಅರ್ಜಿಗಳು ಪ್ರಶಸ್ತಿಗಾಗಿ ಬಂದಿದ್ದವು. ತೀರ್ಪುಗಾರರಾದ ಪ್ರೊ. ಅರವಿಂದ್, ಪ್ರೊ. ಅಕೀಲ್ ಬಿಲಗ್ರಾಮಿ, ಪ್ರೊ. ಮೃಗಾಂಕಾ ಸುರ್, ಪ್ರೊ. ಚಂದ್ರಶೇಖರ ಖರೆ, ಪ್ರೊ.ಶ್ರೀನಿವಾಸ್ ಕುಲಕರ್ಣಿ, ಪ್ರೊ. ಕೌಶಿಕ್ ಬಸು ಅವರು ವಿಜೇತರನ್ನು ಆಯ್ಕೆ ಮಾಡಿದ್ದಾರೆ.
* ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೊರಜಗತ್ತು ಎದುರಿಸುವ ಸಮಸ್ಯೆಗಳನ್ನು ಬೇರುಮಟ್ಟದಲ್ಲಿ ಅರ್ಥೈಸಬೇಕಾಗಿದೆ ಎಂದು ಇಸ್ಫೋಸಿಸ್ ಸೈನ್ಸ್ ಫೌಂಡೇಶನ್ ಟ್ರಸ್ಟಿ ನಾರಾಯಣ್ ಮೂರ್ತಿ ಹೇಳಿದರು.
* ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂಶೋಧನಾ ಕ್ಷೇತ್ರ ಹೆಚ್ಚು ಪ್ರಗತಿ ಸಾಧಿಸುತ್ತಿದೆ. ಕೋವಿಡ್ ವ್ಯಾಕ್ಸಿನ್ ಕಂಡುಹಿಡಿಯುವಿಕೆ ಸಾಧನೆಯಾಗಿದೆ.
Subscribe to Updates
Get the latest creative news from FooBar about art, design and business.
Previous ArticlePESA ಕಾಯ್ದೆಯನ್ನು ಜಾರಿಗೆ ತರಲು ಅಣಿಯಾಗಿರುವ ಮಧ್ಯಪ್ರದೇಶ
Next Article ಬೆಂಗಳೂರಿನಲ್ಲಿ ನವೋದ್ಯಮ ಪಾರ್ಕ್