ಪ್ರತಿ ವರ್ಷ ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶ್ವ ನಿರಾಶ್ರಿತರ ದಿನವು ವಿಶ್ವಾದ್ಯಂತ ನಿರಾಶ್ರಿತರಿಗೆ ಗೌರವ ಸಲ್ಲಿಸಲು ವಿಶ್ವಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವಾಗಿದೆ.
ವಿಶ್ವ ನಿರಾಶ್ರಿತರ ದಿನದ 2024ರ ಥೀಮ್ “ಮನೆಯಿಂದ ದೂರವಿರುವ ಭರವಸೆ ನೀಡುವುದು ; ನಿರಾಶ್ರಿತರನ್ನು ಒಳಗೊಂಡತ್ತೆ ಜಗತ್ತು” ಎಂದು ಥೀಮ್ ಆಗಿದೆ.
ವಿಶ್ವ ನಿರಾಶ್ರಿತರ ದಿನವು ಅವರ ರಾಷ್ಟ್ರೀಯತೆ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳ ಘನತೆ ಮತ್ತು ಯೋಗಕ್ಷೇಮವನ್ನು ಎತ್ತಿಹಿಡಿಯುವ ಹೆಚ್ಚು ಅಂತರ್ಗತ ಮತ್ತು ಸಹಾನುಭೂತಿಯ ಜಗತ್ತನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 36.4 ಮಿಲಿಯನ್ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್ಎಚ್ ಸಿಆರ್ ವರದಿಯು ತಿಳಿಸಿದೆ. ರ ಸಿರಿಯಾ ಸಂಘರ್ಷದ ಎರಡು ದಶಕಕ್ಕೂ ಮುನ್ನ ವಿಶ್ವದಾದ್ಯಂತ ಒಟ್ಟು ನಿರಾಶ್ರಿತರ ಸಂಖ್ಯೆ 4 ಕೋಟಿ ಇತ್ತು. ಬಳಿಕ ಈ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ.
ರಷ್ಯಾ ಯುದ್ಧ ಧೋರಣೆಯಿಂದ ಉಕ್ರೇನ್ನಿಂದ ಇತರ ದೇಶಗಳಿಗೆ ಈವರೆಗೆ 60 ಲಕ್ಷಕ್ಕೂ ಅಧಿಕ ನಿರಾಶ್ರಿತರು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೇ ದೇಶದೊಳಗೆ 80 ಲಕ್ಷ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. 2ನೇ ಮಹಾಯುದ್ಧದ ಬಳಿಕ ಯೂರೋಪ್ ರಾಷ್ಟ್ರಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಳ ವಾಗಿರುವುದು ಇದೇ ಮೊದಲು ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಡಿಸಿದೆ.
Subscribe to Updates
Get the latest creative news from FooBar about art, design and business.
Next Article TET ಪರೀಕ್ಷೆ ಯ ಪ್ರವೇಶ ಪತ್ರಗಳು ಇದೀಗ ಪ್ರಕಟ