* ರಾಜ್ಯ ಸರಕಾರ ಅಥವಾ ಸರಕಾರದ ಆದಿನದ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬೇಕೆಂದರೆ ಕಡ್ಡಾಯವಾಗಿ SSLC ಯವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.
* ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022 ಅನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.
* ಕನ್ನಡ ಭಾಷೆಯ ಬಳಕೆಯನ್ನು ಉಲ್ಲಂಘಿಸಿದರೆ 20000 ರೂ.ಗಳ ವರೆಗೆ ದಂಡ ವಿಧಿಸಿಲಾಗುವದು.
* SSLC ವರೆಗೆ ಕನ್ನಡ ಮಾದ್ಯಮದಲ್ಲಿ ಓದಿದ್ದರೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ.
* ಕೇಂದ್ರ ಮತ್ತು ರಾಜ್ಯ ಸರಕಾರದ ಕಚೇರಿಗಳಲ್ಲಿ ಹಾಗು ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಭಾಷೆ ಪ್ರಚಾರ ಉತ್ತೇಜನ.
* ಕನ್ನಡಿಗರಿಗೆ ನಿಗದಿತ ಪ್ರಮಾಣದ ಉದ್ಯೋಗ ನೀಡುವ ಉದ್ಯಮಿಗಳಿಗೆ ಜಾಮೀನು ಮಂಜೂರು ಮತ್ತು ತೆರಿಗೆ ರಿಯಾಯಿತಿ.
* ಒಬ್ಬ ವ್ಯಕ್ತಿ ಮತ್ತು ಆತನ ಪೋಷಕರು 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸಿದರೆ ಅಥವಾ ಕನ್ನಡ ಓದಲು ಬರೆಯಲು ಬರುತ್ತಿದೆ ಅವರನ್ನು ಕನ್ನಡಿಗರು ಎಂದು ಪರಿಗಣಿಸಲಾಗುತ್ತದೆ.