* ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ನಡೆಸಲಾದ ಸ್ವಚ್ಛ ಭಾರತ ಸಮೀಕ್ಷೆ 2022 ರಲ್ಲಿ ಕರ್ನಾಟಕವು 20 ನೇ ಸ್ಥಾನ ಹೊಂದಿದೆ.
* ಪ್ರಥಮ ಸ್ಥಾನ ತೆಲಂಗಾಣ, ಹಾಗೂ ದ್ವಿತೀಯ ಸ್ಥಾನ ಹರಿಯಾಣ ಪಡೆದುಕೊಂಡಿದೆ.
* ಸಮೀಕ್ಷೆಯಲ್ಲಿ 1000 ಅಂಕಗಳಿಗೆ ತೆಲಂಗಾಣ 971 ಮತ್ತು ಕರ್ನಾಟಕ 635 ಅಂಕಗಳನ್ನು ಪಡೆದುಕೊಂಡಿದೆ.
* ಹರಿಯಾಣ ರಾಜ್ಯದ ಭವಾನಿ ಜಿಲ್ಲೆಯು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ಜಿಲ್ಲೆ ಎನಿಸಿಕೊಂಡಿದೆ.
– ತೆಲಂಗಾಣದ ಜಗ್ತಿಯಲ್ ಜಿಲ್ಲೆ 2 ನೇ ಸ್ಥಾನ.
– ನಿಜಾಮಾಬಾದ್ ಜಿಲ್ಲೆ 3 ನೇ ಸ್ಥಾನ.
– ಕರ್ನಾಟಕದ ಉಡುಪಿ ಜಿಲ್ಲೆ 129 ನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಇದು ಪ್ರಥಮ ಸ್ಥಾನ ಹೊಂದಿದ ಜಿಲ್ಲೆಯಾಗಿದೆ.
* ಪ್ರಧಾನಿ ನರೇಂದ್ರ ಮೋದಿಯವರು “2019 ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನದಂದು ಭಾರತವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಸ್ವಚ್ಛ ಭಾರತ” ಎಂದು ನವದೆಹಲಿಯ ರಾಜಪಥದಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು.
* ಭಾರತದಾದ್ಯಂತ ಸಮೀಕ್ಷೆ ನಡೆದಿದ್ದು , ಒಟ್ಟು 17,559 ಗ್ರಾಮ , 709 ಜಿಲ್ಲೆ ಹಾಗೂ ಕರ್ನಾಟಕದಲ್ಲಿ 30 ಜಿಲ್ಲೆಗಳನ್ನೊಳಗೊಂಡಂತೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಇನ್ನು ಹಲವಾರು ರೀತಿಯಲ್ಲಿ ಸಮೀಕ್ಷೆ ಮಾಡಲಾಯಿತು.
Subscribe to Updates
Get the latest creative news from FooBar about art, design and business.
Previous Articleಹಲೋ ಬದಲು ‘ವಂದೇ ಮಾತರಂ’ ಕಡ್ಡಾಯ : ಮಹಾರಾಷ್ಟ್ರ ಸರ್ಕಾರದಿಂದ ಆದೇಶ