* 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, 2ನೇ ಬಾರಿಗೆ ಫೆಬ್ರುವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳಾದ ಐ ಎಸ್ ಎನ್ ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಬಜೆಟ್ ಮಂಡಿಸುವಾಗ ಉಪಸ್ಥಿತರಿದ್ದರು.
* ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆಯನ್ನು ನೀಡಿ, ಶಿಕ್ಷಣ ಇಲಾಖೆಗೆ 37960 ಕೋಟಿ ರೂ ಮೀಸಲಿಟ್ಟಿದೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.
* ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ಬಸ್ ಯೋಜನೆಗಾಗಿ 100 ಕೋಟಿ ರೂ ಮೀಸಲಿಡಲಾಗಿದೆ.
* ಯುವಸ್ನೇಹಿ ಯೋಜನೆ : ಈ ಯೋಜನೆಯು ಪದವಿ ಶಿಕ್ಷಣ ಪೂರೈಸಿ ಮೂರೂ ವರ್ಷವಾದರೂ ಉದ್ಯೋಗ ದೊರೆಯದೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಯುವಸ್ನೇಹಿ ಯೋಜನೆಯಡಿ ಒಂದು ಬಾರಿಯ 2000 ರೂ ಗಳನ್ನು ಕೊಡಲಾಗುವದು. ಐಐಟಿಯಲ್ಲಿ ತರಬೇತಿ ಪಡೆಯುವವರಿಗೆ 1500 ರೂ ಶಿಷ್ಯವೇತನ ಹಾಗೂ ತರಬೇತಿ ಪೂರ್ಣಗೊಂಡವರಿಗೆ 3 ತಿಂಗಳುಗಳ ಕಾಲ 1500 ರೂ ನೀಡಲಾಗುವದು.
* ಎನ್.ಸಿ.ಸಿ ಘಟಕ ಸ್ಥಾಪನೆ, ಮಹಿಳಾ ಕಾಲೇಜುಗಳಲ್ಲಿ ಯೋಗ ತರಬೇತಿ, ತುಮಕೂರು ಜಿಲ್ಲೆಯಲ್ಲಿ ಮಹಾವಿದ್ಯಾಲಯ ಸ್ಥಾಪನೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇನ್ನು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.
* ಗ್ರಾಮ ಸಹಾಯಕ ಹುದ್ದೆಗಳಿಗೆ ಜನಸೇವಕ ಎಂದು ಮರುನಾಮಕರಣ ಮಾಡುವದರ ಜೊತೆಗೆ ಅವರಿಗೆ ನೀಡುವ ಗೌರವ ಧನವನ್ನು 13 ಸಾವಿರದಿಂದ 14 ಸಾವಿರದ ವರೆಗೆ ಏರಿಕೆ ಮಾಡಲಾಗಿದೆ.
* ರೈತ ಮಹಿಳೆಯರಿಗೆ ಕೋಳಿ ಸಾಕಣೆ ಪ್ರೋತ್ಸಾಹಿಸಲು ಹೆಚ್ಚಿನ ಆದ್ಯತೆ, ಇಂಧನ ಕ್ಷೇತ್ರಕ್ಕೆ ಸ್ಟೋರೇಜ್ ಪವರ್ ಪ್ಲಾನ್ ಯೋಜನೆ, ವಿವಿಧ ದೇವಸ್ಥಾನಗಳ ಅಭಿವೃದ್ಧಿಗಾಗಿ 1000 ಕೋಟಿ ಬಿಡುಗಡೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ದ್ರಾಕ್ಷಿ ಬೆಳೆಯುವ ರೈತರಿಗೆ ಪ್ರೋತ್ಸಾಹ, 12175 ಮೀನುಗಾರರಿಗೆ ಕ್ರೆಡಿಟ್ ಕಾರ್ಡ್, ಹಾವೇರಿ ಮತ್ತು ಬೈಂದೂರಿನಲ್ಲಿ ಮೀನು ಪಾಲನಾ ಹಾಗೂ ಸೀಫುಡ್ ಪಾರ್ಕ್ ಸ್ಥಾಪನೆ, ತೀರ್ಥಹಳ್ಳಿಗೆ ಕೃಷಿ ಮತ್ತು ಸಂಶೋಧನಾ ಅಭಿವೃದ್ಧಿ ಕೇಂದ್ರ ನೆರವು, ಪ್ರವಾಸಿ ಗೈಡ್ ಗಳಿಗೆ ಮಾಸಿಕ ಪ್ರೋತ್ಸಾಹ ಧನ ಹೆಚ್ಚಳ ಇನ್ನು ಹಲವಾರು ಯೋಜನೆಗಳನ್ನು ಬಜೆಟ್ ಮಂಡನೆಯಲ್ಲಿ ರೂಪಿಸಲಾಗಿದೆ.
Subscribe to Updates
Get the latest creative news from FooBar about art, design and business.