ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್ ಎಫ್ ಸಿ) ಯು 1959 ರಲ್ಲಿ ಸ್ಥಾಪಿತವಾಗಿದ್ದು, ರಾಜ್ಯದಲ್ಲಿನ ಹೊಸ ಕಿರು, ಸಣ್ಣ ಮತ್ತು ಮಾಧ್ಯಮ ಪ್ರಮಾಣದ ಉದ್ದಿಮೆಗಳ ವಿಸ್ತರಣೆ, ಆಧುನಿಕರಣ ಮತ್ತು ವೈವಿಧ್ಯೀಕರಣಗೊಳಿಸಲು ದೀಘಾ೯ವಧಿಯ ಸಾಲವನ್ನು ನೀಡುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ದಿನಾಂಕ : 18/03/2023 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ : ದಿ ಮ್ಯಾನೇಜಿಂಗ್ ಡೈರೆಕ್ಟರ್
KSFC ಹೆಡ್ ಆಫೀಸ್, No : 1/1, ತಿಮ್ಮಯ್ಯ ರೋಡ್, ಬೆಂಗಳೂರ-560052.
No. of posts: 41
Application Start Date: 28 ಫೆಬ್ರುವರಿ 2023
Application End Date: 18 ಮಾರ್ಚ್ 2023
Work Location: ಕರ್ನಾಟಕ
Selection Procedure:
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಹಾಗೂ ಅರ್ಹತಾ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
Qualification:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ/ಬೋರ್ಡ್ ದಿಂದ ಇಂಜಿನಿಯರಿಂಗ್/ ಕಾನೂನು/ MBA/ M.Com/ ACA/ ICWA ವಿದ್ಯಾರ್ಹತೆಯನ್ನು ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಕನಿಷ್ಠ 70% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪಾಸಾಗಿರಬೇಕು.
SC/ST ಅಭ್ಯರ್ಥಿಗಳು 60% ಅಂಕಗಳೊಂದಿಗೆ ಪಾಸಾಗಿರಬೇಕು.
2 ವರ್ಷಗಳ ಸೇವಾನುಭಾವ ಹೊಂದಿರಬೇಕು.
Fee:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2000/-ರೂ
– SC/ ST ಅಭ್ಯರ್ಥಿಗಳಿಗೆ 1500/- ರೂ
* ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು DD ಮುಖಾಂತರ ಸಲ್ಲಿಸಬೇಕು
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 25 ವರ್ಷ ವಯಸ್ಸು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ
OBC ಅಭ್ಯರ್ಥಿಗಳಿಗೆ 3 ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇರಲಿದೆ.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 52,650/- ರೂ ಗಳಿಂದ 97,100/-ರೂ ಗಳ ವರೆಗೆ ನಿಗದಿಪಡಿಸಲಾಗಿದೆ.