* ಕೇಂದ್ರ ವಸತಿ ಸಚಿವಾಲಯವು ಬಿಡುಗಡೆ ಮಾಡಿದ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣ್ 2022 ರ ಶ್ರೇಯಾಂಕದ ಪ್ರಕಾರ ದೇಶದ ಟಾಪ್ 100 ಸ್ವಚ್ಛ ನಗರಗಳಲ್ಲಿ ಕೇವಲ ಎರಡು ನಗರಗಳ ಹೆಸರುಗಳು ಕಾಣಿಸಿಕೊಂಡಿರುವುದರಿಂದ ಕರ್ನಾಟಕದ ನಗರಗಳು ಸ್ವಚ್ಛತೆಯ ವಿಷಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿವೆ.
* ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಮುಖ ನಗರಗಳಲ್ಲಿ ಮೈಸೂರು 8 ನೇ ಸ್ಥಾನ ಪಡೆದರೆ ಹುಬ್ಬಳ್ಳಿ ಧಾರವಾಡ 82 ನೇ ಸ್ಥಾನ ಪಡೆದುಕೊಂಡಿದೆ.
* ಮೂರರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಮೈಸೂರಿಗೆ ಸ್ವಚ್ಛ ಮಧ್ಯಮ ನಗರ ಪ್ರಶಸ್ತಿಯೂ ಲಭಿಸಿದೆ.
* ಕ್ಲೀನ್ ಕಂಟೋನ್ಮೆಂಟ್ ವಿಭಾಗದಲ್ಲಿ ಬೆಳಗಾವಿ ಕಂಟೋನ್ಮೆಂಟ್ 44 ನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ಡಿಯೋಲಾಲಿ ಕಂಟೋನ್ಮೆಂಟ್ ಮೊದಲ ರ್ಯಾಂಕ್ ಪಡೆದುಕೊಂಡಿದೆ.