ಕಿರಣ್ ರಾವ್ ನಿರ್ದೇಶನದ ಹಿಂದಿ ಸಿನಿಮಾ ‘ಲಾಪತಾ ಲೇಡೀಸ್’ 2025ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ.
‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದ ಅಕಾಡೆಮಿ ಪ್ರಶಸ್ತಿಗಾಗಿ ವಾರ್ಷಿಕವಾಗಿ ಭಾರತೀಯ ಅಧಿಕೃತ ಪ್ರವೇಶವನ್ನ ಆಯ್ಕೆ ಮಾಡುವ ಉನ್ನತ ಸಂಸ್ಥೆಯಾದ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ಐ) ಕಡೆಯಿಂದ (ಸೆಪ್ಟೆಂಬರ್ 23)ರಂದು ಅಧಿಕೃತ ಘೋಷಣೆಯಾಗಿದೆ. ಆಸ್ಕರ್ ಅವಾರ್ಡ್ಸ್ಗೆ ಭಾರತದಿಂದ ‘ಲಾಪತಾ ಲೇಡೀಸ್’ ರೇಸ್ಗೆ ಇಳಿದಿದೆ.
ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್ನ ಲಾ ಪತಾ ಲೇಡೀಸ್ ಹಲವು ದಾಖಲೆಗಳನ್ನು ಇದಾಗಲೇ ಬರೆದಿದೆ. ನೂರಾರು ಕೋಟಿ ಬಜೆಟ್ನಲ್ಲಿ ನಿರ್ಮಿಸಿ, ಕ್ರೌರ್ಯವನ್ನು ವಿಜೃಂಭಿಸುವ ಜೊತೆಗೆ ಬ್ಲಾಕ್ಬಸ್ಟರ್ ಎಂದೂ ಸಾಬೀತಾಗಿರೋ ಅನಿಮಲ್ ಚಿತ್ರದ ದಾಖಲೆಯನ್ನು ಲಾಪತಾ ಲೇಡೀಸ್ ಮುರಿದು ಹಾಕಿತ್ತು.
ಇದೀಗ ಈ ಚಲಚಿತ್ರವು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಸಿನಿಮಾಕ್ಕೆ ನಾಲ್ಕು ಕೋಟಿ ಬಜೆಟ್ನ ಈ ಸಿನಿಮಾ ಚಿತ್ರಮಂದಿರದಲ್ಲಿ 21 ಕೋಟಿ ಗಳಿಸಿತ್ತು. ಕೊನೆಗೆ ನೆಟ್ಫ್ಲಿಕ್ಸ್ನಲ್ಲಿಯೂ ಇದು ದಾಖಲೆ ಬರೆದಿದ್ದು, ಈಗ ಆಸ್ಕರ್ ಅಂಗಳಕ್ಕೆ ಹೋಗಿದೆ.
ಆಸ್ಕರ್ ರೇಸ್ನಲ್ಲಿ ಈ ಚಿತ್ರವೂ ಸೇರಿದಂತೆ 29 ಸಿನಿಮಾಗಳಿದ್ದವು. ಆ ಪೈಕಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ವೇ ಆಯ್ಕೆಯಾಗಲಿದೆ ಎಂದೇ ಕೊನೆಯ ಕ್ಷಣದವರೆಗೂ ಅಂದುಕೊಳ್ಳಲಾಗಿತ್ತು. ಉಳಿದಂತೆ ತಮಿಳು ಚಿತ್ರ ಮಹಾರಾಜ, ತೆಲುಗುವಿನ ಕಲ್ಕಿ 2898 AD ಮತ್ತು ಹನುಮಾನ್, ಬಾಲಿವುಡ್ನ ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ಆರ್ಟಿಕಲ್ 370 ಸಹ ಪಟ್ಟಿಯಲ್ಲಿದ್ದವು. ಆದರೆ ನಿರೀಕ್ಷೆಗೂ ಮೀರಿ ಲಾಪತಾ ಲೇಡೀಸ್ ಆಯ್ಕೆಯಾಗಿದೆ.
ಮೊದಲ ಚಿತ್ರದಲ್ಲಿಯೇ ಈ ಪರಿಯ ಯಶಸ್ಸು ಕಂಡಿದ್ದಾರೆ.
ಕಳೆದ ವರ್ಷ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
12 ಹಿಂದಿ ಚಿತ್ರಗಳು, 6 ತಮಿಳು, 4 ಮಲಯಾಳಂ ಚಲನಚಿತ್ರ ಪೈಕಿ ‘ಲಾಪತಾ ಲೇಡೀಸ್’ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. 13 ಸದಸ್ಯರು ಇರುವ ತೀರ್ಪುಗಾರರ ತಂಡ ‘ಲಾಪತಾ ಲೇಡೀಸ್’ ಚಿತ್ರವನ್ನ ಆಯ್ಕೆ ಮಾಡಿದೆ.
‘ಅನಿಮಲ್’, ‘ಕಿಲ್’, ‘ಕಲ್ಕಿ 2898 AD’, ‘ಜೋರಾಮ್’, ‘ಮೈದಾನ್’, ‘ಆರ್ಟಿಕಲ್ 370’, ‘ಆಟಂ’ ಮುಂತಾದ 29 ಚಿತ್ರಗಳು ರೇಸ್ನಲ್ಲಿದ್ದವು. ಅಂತಿಮವಾಗಿ ‘ಲಾಪತಾ ಲೇಡೀಸ್’ ಸೆಲೆಕ್ಟ್ ಆಗಿದೆ.