ಪ್ರತಿ ವರ್ಷ ಮೇ 18 ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
ಸಾಂಸ್ಕೃತಿಕ ವಿನಿಮಯ, ಸಾಂಸ್ಕೃತಿಕ ಪುಷ್ಟಿಕರಣ, ಜನರಲ್ಲಿ ಪರಸ್ಪರ ತಿಳಿವಳಿಕೆ, ಸಹಕಾರ ಮತ್ತು ಶಾಂತಿ ಬೆಳೆಸುವಲ್ಲಿ ವಸ್ತುಸಂಗ್ರಹಾಲಯಗಳ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಪ್ರತಿ ವರ್ಷ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
2024ರ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಥೀಮ್ “ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತು ಸಂಗ್ರಹಾಲಯ” ಎಂಬ ಪರಿಕಲ್ಪನೆಯೊಂದಿಗೆ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ವಾರ್ಷಿಕ ಆಚರಣೆಯನ್ನು 1977 ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ (ICOM) ಘೋಷಿಸಿತು. ಅಂದು ರಷ್ಯಾದ ಮಾಸ್ಕೋದಲ್ಲಿ ನಡೆದ ICOM ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮೇ 18 ರಂದು ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗತಕಾಲದ ವೈಭವ, ಶೌರ್ಯ, ಸಾಹಸ, ಶ್ರಮ, ಐತಿಹಾಸಿಕ ಮಹತ್ವ, ಹಿಂದಿನ ಜನರ ವಿಭಿನ್ನ ವಸ್ತುಗಳ ಬಳಕೆ, ಕಲೆ, ಅನ್ವೇಷಣೆಯಿಂದ ಹಿಡಿದು ವಿಜ್ಞಾನ-ತಂತ್ರಜ್ಞಾನದ ಮಹತ್ವವನ್ನು ಪೀಳಿಗೆಯಿಂದ ಪೀಳಿಗೆಗೆ ತಿಳಿಸಲು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು (ಐಎಂಡಿ) ವಿಶ್ವಾದ್ಯಂತ ಪ್ರತಿವರ್ಷ ಮೇ 18ರಂದು ಆಚರಿಸಲಾಗುತ್ತದೆ