* ಭಾರತೀಯ ನೌಕಾ ಪಡೆಗೆ ಅಗತ್ಯವಾದ ಅಪ್ಲಿಕೇಶನ್ಗಳನ್ನು(ಆ್ಯಪ್) ಅಭಿವೃದ್ಧಿಪಡಿಸುವ ಸಲುವಾಗಿ ನೇವಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್ ಒಪ್ಪಂದ ಮಾಡಿಕೊಂಡಿವೆ.
* ಹವಾಮಾನಶಾಸ್ತ್ರ ಹಾಗೂ ಸಾಗರಶಾಸ್ತ್ರದಲ್ಲಿ ಉಪಗ್ರಹ ಆಧಾರಿತ ಆ್ಯಪ್ ಗಳನ್ನು ರೂಪಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
* ಈ ಒಡಂಬಡಿಕೆಯು 2017 ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದ ವಿಸ್ತರಣೆಯಾಗಿದೆ .
* * ವಿದ್ಯಾರ್ಥಿಗಳಿಗೆ ನೆರವು : –
* ಸೆಂಟರ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಎಜುಕೇಷನ್ ಇನ್ ಏಷ್ಯಾ ಆಂಡ್ ಪೆಸಿಫಿಕ್ ಇದರ ವಿದ್ಯಾರ್ಥಿಗಳಿಗೆ ತರಬೇತಿ ಕೋರ್ಸ್ಗಳನ್ನು ನಡೆಸಲು ಎಸ್ಎಸಿ ಮೂಲ ಸೌಕರ್ಯವನ್ನು ಒದಗಿಸುತ್ತದೆ.
* ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಗಳ ಸಂಶೋಧನೆ, ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆ ಇದರ ಕಾರ್ಯಭಾರವಾಗಿದೆ. ಅವು ದೂರಸಂವೇದಿ, ದೂರಸಂಪರ್ಕಗಳು, ಉಪಗ್ರಹ ನ್ಯಾವಿಗೇಶನ್ ಮತ್ತು ಹವಾಮಾನಶಾಸ್ತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನವಾಗಿದೆ.
* ಎಸ್ಎಸಿ ಒಟ್ಟು ಮತ್ತು ಮೂರು ಕ್ಯಾಂಪಸ್ ಹೊಂದಿದೆ. ದೆಹಲಿಯಲ್ಲಿ ಒಂದು ಹಾಗೂ ಅಹಮದಾಬಾದ್ ನಲ್ಲಿ ಎರಡು ಕ್ಯಾoಪಸ್ ಗಳಿವೆ .
Subscribe to Updates
Get the latest creative news from FooBar about art, design and business.
Previous Articleಪ್ರಧಾನಿಯ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ
Next Article ಚೆಸ್ ಟೂರ್ನಿಯಲ್ಲಿ ಪ್ರಗ್ನಾನಂದಗೆ ಜಯ