ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ “ನಾರಿ ಶಕ್ತಿ ಪ್ರದರ್ಶನ’ವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತಂದಿದ್ದ ಕೇಂದ್ರ ಸರಕಾರ ಮುಂದಿನ ವರ್ಷಕ್ಕೆ ವಿಶೇಷ ಯೋಜನೆಯನ್ನು ಹಾಕಿಕೊಂಡಿದೆ.
2024ರ ಗಣತಂತ್ರ ದಿನ ಪರೇಡ್ ಸಂದರ್ಭ ಕರ್ತವ್ಯ ಪಥದಲ್ಲಿ ಬ್ಯಾಂಡ್, ಪಥ ಸಂಚಲನ, ಸ್ತಬ್ಧಚಿತ್ರ ಸಹಿತ ಎಲ್ಲ ತಂಡಗಳಲ್ಲಿಯೂ ಮಹಿಳೆಯರೇ ಇರಲಿದ್ದಾರೆ ಎಂದು ರಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ.
ನಾರೀಶಕ್ತಿ ಪ್ರಗತಿ ಕಳೆದ ಕೆಲವು ವರ್ಷಗಳಿಂದ ಗಣತಂತ್ರ ದಿನದ ಪರೇಡ್‌ನಲ್ಲಿ ಕೆಲವು ಸಂಪೂರ್ಣ ಮಹಿಳಾ ತಂಡಗಳು, ಕೆಲವು ತಂಡಗಳಲ್ಲಿ ಪುರುಷರ ಜತೆಗೆ ಸ್ತ್ರೀಯರು, ಪುರುಷ ಮಿಲಿಟರಿ ತಂಡಗಳಿಗೆ ಮುಂದಾಳುವಾಗಿ ಮಹಿಳೆ- ಹೀಗೆ ನಾರೀ ಶಕ್ತಿಯನ್ನು ಅನಾವರಣಗೊಳಿಸುತ್ತ ಬರಲಾಗಿದೆ.
ಪ್ರಸ್ತುತ ವರ್ಷದ ಜನವರಿ 26ರಂದು ನಡೆದ ಪರೇಡ್‌ಗೆ “ನಾರೀಶಕ್ತಿ’ಯೇ ಧ್ಯೇಯವಾಕ್ಯವಾಗಿದ್ದು, ಗಣರಾಜ್ಯೋತ್ಸವವನ್ನು ಸಂಪೂರ್ಣ ಮಹಿಳಾಮಯವಾಗಿಸಲು ಕೇಂದ್ರ ನಿರ್ಧರಿಸಿದೆ.