ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯಲ್ಲಿ (ಸ್ಪೆಷಲ್ ಆರ್‌ಪಿಸಿ) 1500 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿ ಆದೇಶ ಹೊರಡಿಸಿದೆ.
1500 ಹುದ್ದೆಗಳಲ್ಲಿ 886 ಹುದ್ದೆಗಳು ಕಲ್ಯಾಣ- ಕರ್ನಾಟಕೇತರ ಹುದ್ದೆಗಳಾಗಿದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 614 ಹುದ್ದೆಗಳನ್ನು ಮೀಸಲಿಡಲಾಗಿದೆ.
ಒಟ್ಟು 1,500 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪ್ರತಿಭಾವಂತ ಕ್ರೀಡಾ ಪಟುಗಳಿಗಾಗಿ ಮೀಸಲಿಡಲಾಗಿದೆ.
ಇದರಲ್ಲಿ 12 ಸ್ಥಾನ ಕಲ್ಯಾಣ- ಕರ್ನಾಟಕದ ಅಭ್ಯರ್ಥಿಗಳಿಗಾಗಿ ನಿಗದಿ ಮಾಡಲಾಗಿದೆ.
– ಮಂಗಳೂರು, ಶಿವಮೊಗ್ಗ, ಶಿಗ್ಗಾವಿ, ಹಾಸನ, ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ತುಮಕೂರು, ಮುನಿರಾಬಾದ್ ಮೊದಲಾದ ಕಡೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಯಲಿದೆ.