ಪ್ರತಿ ವರ್ಷ ಅಕ್ಟೋಬರ್ 17 ರಂದು ಅಂತರ್ ರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.
2023 ಅಕ್ಟೋಬರ್ 17 ಅತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನದ ಥೀಮ್ ಯೋಗ್ಯ ಕೆಲಸ ಮತ್ತು ಸಾಮಾಜಿಕ ರಕ್ಷಣೆ ಹಾಗೂ ಎಲ್ಲರನ್ನು ಗೌರವಿಸುವುದು(Decent work And Social protection:Putting Dignity in Practice for all)
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 1992ರ ಡಿಸೆಂಬರ್ 22ರಂದು ಬಡತನ ನಿರ್ಮೂಲನ ದಿನದ ಆಚರಣೆಯ ಬಗ್ಗೆ ನಿರ್ಣಯ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನದ ಆಚರಣೆಗೆ ಚಾಲನೆ ನೀಡಲಾಯಿತು.
1993ರಲ್ಲಿ ಪ್ರಥಮ ಬಾರಿಗೆ ಈ ದಿನವನ್ನು ಆಚರಿಸಲಾಯಿತು.
ಬಡತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಬಡಜನರಿಗೆ ಉದ್ಯೋಗ ಪೂರೈಸುವ ಜೊತೆಗೆ ನಿರಂತರ ಆದಾಯ ಕೌಟುಂಬಿಕ ಸಬಲೀಕರಣ, ಸಾಮಾಜಿಕ ನ್ಯಾಯ, ರಕ್ಷಣಾತ್ಮಕ ವಾತಾವರಣ, ಮಾವಿಯತೆಯ ಘನತೆಯನ್ನು ಎತ್ತಿ ಹಿಡಿಯುವುದು ವಿಶ್ವಸಂಸ್ಥೆಯ ಉದ್ದೇಶವಾಗಿದೆ.