ಮುಂದಿನ ತಿಂಗಳ ಪ್ಯಾರಿಸ್ ಒಲಿಂಪಿಕ್ಸ್ 2024 ಗಾಗಿ ಹಾಕಿ ಇಂಡಿಯಾ 16 ಸದಸ್ಯರ ತಂಡವನ್ನು ಘೋಷಿಸಿದ್ದರಿಂದ ಅನುಭವಿ ಫಾರ್ವರ್ಡ್ ಹರ್ಮನ್ಪ್ರೀತ್ ಸಿಂಗ್ ಅವರನ್ನು ಜೂನ್ 26 ರಂದು (ಬುಧವಾರ) ನಾಯಕನಾಗಿ ಮತ್ತು ಹಾರ್ದಿಕ್ ಸಿಂಗ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಯಿತು.
ನೆದರ್ಲೆಂಡ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ದಕ್ಷಿಣ ಆಫ್ರಿಕಾ ಮತ್ತು ಅತಿಥೇಯ ಫ್ರಾನ್ಸ್ ‘ಎ’ ಗುಂಪಿನಲ್ಲಿವೆ. ಭಾರತ ತಂಡದ ಆಟಗಾರರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಒಲಂಪಿಕ್ಸ್ ಗೆ ಸಿದ್ಧತೆಯಲ್ಲಿದ್ದಾರೆ.
ಈ ಬಾರಿ ತಂಡದಲ್ಲಿ ಗೋಲ್ಕೀಪರ್ ಆಗಿರುವ ಪಿ.ಆರ್.ಶ್ರೀಜೆಶ್ ಹಾಗೂ ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಅವರಿಗೆ ಇದು ನಾಲ್ಕನೇ ಒಲಿಂಪಿಕ್ ಆಗಿದ್ದು, ನಾಯಕ ಹರ್ಮನ್ ಪ್ರೀತ್ ಅವರು ಒಟ್ಟು ಮೂರು ಬಾರಿ ಒಲಿಂಪಿಕ್ನಲ್ಲಿ ಅಡಿದ್ದಾರೆ.
ಡಿಫೆನ್ಸ್ನಲ್ಲಿ ಹರ್ಮನ್ ಪ್ರೀತ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುಮಿತ್ ಹಾಗೂ ಸಂಜಯ್ ಆಡಲಿದ್ದಾರೆ. ಮಿಡ್ಫೀಲ್ಡ್ನಲ್ಲಿ ಪಾಲ್, ಶಮ್ಶೇರ್ ಸಿಂಗ್. ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ವಿವೇಕ್ ಸಾಗರ್ ಪ್ರಸಾದ್ ಆಡಲಿದ್ದಾರೆ.
ಪೂಲ್ನ ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ಫೈನಲ್ಗೆ ಪ್ರವೇಶಿಸಲಿವೆ.
ಪ್ಯಾರಿಸ್ನಲ್ಲಿ ಭಾರತಕ್ಕಾಗಿ ಒಲಿಂಪಿಕ್ಸ್ಗೆ ಪಾದಾರ್ಪಣೆ ಮಾಡಲಿರುವ ಐದು ಆಟಗಾರರೆಂದರೆ ಜರ್ಮನ್ಪ್ರೀತ್ ಸಿಂಗ್, ಸಂಜಯ್, ರಾಜ್ ಕುಮಾರ್ ಪಾಲ್, ಅಭಿಷೇಕ್ ಮತ್ತು ಸುಖಜೀತ್ ಸಿಂಗ್.
ಭಾರತ ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ ಒಟ್ಟು 12 ಒಲಿಂಪಿಕ್ ಪದಕಗಳನ್ನು ಹೊಂದಿದೆ.
* ಭಾರತ ತಂಡದಲ್ಲಿ
– ಗೋಲ್ಕೀಪರ್: ಶ್ರೀಜೆಶ್ ಪರಟ್ಟು ರವೀಂದ್ರನ್
– ಡಿಫೆಂಡರ್ಗಳು: ಜರ್ಮನ್ಪ್ರೀತ್ ಸಿಂಗ್, ಅಮಿತ್ ರೊಹಿದಾಸ್, ಹರ್ಮನ್ಪ್ರೀತ್ ಸಿಂಗ್, ಸುಮಿತ್, ಸಂಜಯ್
– ಮಿಡ್ಫೀಲ್ಡರ್ಗಳು: ರಾಜ್ಕುಮಾರ್ ಪಾಲ್, ಶಮ್ಶೇರ್ ಸಿಂಗ್, ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್
– ಫಾರ್ವರ್ಡ್ : ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್ದೀಪ್ ಸಿಂಗ್, ಗುರ್ಜಂತ್ ಸಿಂಗ್
– ಬದಲಿ ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.
* ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು :
ಜುಲೈ 27 ನ್ಯೂಜಿಲೆಂಡ್ ವಿರುದ್ಧ
ಜುಲೈ 29 ಅರ್ಜೆಂಟಿನಾ ವಿರುದ್ಧ
ಜುಲೈ 30 ಐರ್ಲೆಂಡ್ ವಿರುದ್ಧ
ಆಗಸ್ಟ್ 1 ಬೆಲ್ಜಿಯಂ ವಿರುದ್ಧ
ಆಗಸ್ಟ್ 2 ಆಸ್ಟೇಲಿಯಾ ವಿರುದ್ಧ
Subscribe to Updates
Get the latest creative news from FooBar about art, design and business.
Previous Articleಡಿಸೆಂಬರ್ 20 ರಿಂದ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ
Next Article HCL ನಲ್ಲಿ ಹುದ್ದೆಗಳ ನೇಮಕಾತಿ