* ನವೆಂಬರ್ 3 ರಂದು ನಡೆದ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಹಾಗೂ ಪಿ.ವಿ.ನಂದಿದಾ ಇವರುಗಳು ಕ್ರಮವಾಗಿ ಓಪನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.
* ಪ್ರಗ್ನಾನಂದ ಅವರು ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದವರೇ ಆದ ಬಿ.ಅಧಿಬನ್ ಅವರೊಂದಿಗೆ 63 ನಡೆಗಳಲ್ಲಿ ಡ್ರಾ ಮಾಡಿಕೊಂಡರು, ಈ ಮೂಲಕ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.
* ಮಹಿಳೆಯರ ವಿಭಾಗದಲ್ಲಿ ನಂದಿದಾ ಅವರು ಒಂಬತ್ತನೇ ಸುತ್ತಿನಲ್ಲಿ ದಿವ್ಯಾ ದೇಶಮುಖ್ ಎದುರು ಡ್ರಾ ಮಾಡಿಕೊಂಡು ಒಟ್ಟು 7.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.
* ಕಳೆದ ವರ್ಷ 2021ರ ಚೆಸ್ ವಿಶ್ವಕಪ್ನಲ್ಲಿ ಪ್ರಗ್ನಾನಂದ ಅವರು 90 ನೇ ಶ್ರೇಯಾಂಕವಾಗಿ ಪ್ರವೇಶಿಸಿದ್ದರು, 2 ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ ಸಾಧನೆ ಕೂಡ ಮಾಡಿದ್ದರು, 3 ನೇ ಸುತ್ತಿನಲ್ಲಿ ರ್ಯಾಪಿಡ್ ಟೈಬ್ರೇಕ್ಗಳಲ್ಲಿ GM ಮೈಕಾಲ್ ಕ್ರಾಸೆಂಕೋವ್ ಅವರನ್ನು ಸೋಲಿಸಿದ ನಂತರ 4 ನೇ ಸುತ್ತಿಗೆ ಮುನ್ನಡೆದರು.
Subscribe to Updates
Get the latest creative news from FooBar about art, design and business.
ಪ್ರಜ್ಞಾನಂದ ಹಾಗೂ ನಂದಿದಾ ಇವರಿಗೆ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ದೊರೆಕಿದೆ
Previous Articleಮೊದಲ ದಿನ 275 ಕೋಟಿ ವ್ಯವಹಾರ ದೇಶದಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಚಾಲನೆ