* ಇತ್ತೀಚೆಗೆ ಕೇಂದ್ರ ಸರ್ಕಾರವು ತಡೆರಹಿತವಾಗಿ ಸರಕು ಸಾಗಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕು ಸಾಗಾಣೆಯ ರಾಷ್ಟ್ರೀಯ ನೀತಿಯನ್ನು ಬಿಡುಗಡೆಗೊಳಿಸಿದೆ.
* ಸರಕು ಸಾಗಣೆಯ ರಾಷ್ಟ್ರೀಯ ನೀತಿಯಿಂದಾಗಿ ಸದ್ಯಕ್ಕೆ ಇರುವ ಶೇಕಡ 13 ರಿಂದ 14 ರಷ್ಟು ಇರುವ ಸಾಗಣೆ ವೆಚ್ಚವೂ ಕಡಿಮೆ ಮಾಡುವ ಮುಖ್ಯ ಉದ್ದೇಶವನ್ನು ಹೊಂದಲಾಗಿದೆ.
* ರೈಲು ರಸ್ತೆ ಮತ್ತು ಜಲಮಾರ್ಗಗಳನ್ನು ಒಟ್ಟುಗೂಡಿಸುವಂತಹ ಮುಖ್ಯ ಉದ್ದೇಶವನ್ನು ಈ ಯೋಜನೆಯು ಹೊಂದಿರುತ್ತದೆ.
* ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸೆಪ್ಟೆಂಬರ್ 17 ರಂದು ಪ್ರಾರಂಭಿಸಲಿದ್ದಾರೆ ಎಂದು ಪಿಎಂಒ ಶುಕ್ರವಾರ ಹೊರಡಿಸಿದ ಹೇಳಿಕೆ ತಿಳಿಸಿದೆ.
* “ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಅಧಿಕವಾಗಿರುವುದರಿಂದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಅಗತ್ಯವನ್ನು ಅನುಭವಿಸಲಾಗಿದೆ. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯ. ,” ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.