* ಕೊವೀಡ್ (Corona) ನಂತರ ಹೆಚ್ಚಳವಾಗಿದ್ದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ರೋಜ್‌ಗಾರ್ ಮೇಳಕ್ಕೆ (Rozgar Mela) ಚಾಲನೆ ನೀಡಿದರು.
* 2023ರ ವೇಳೆಗೆ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಗುರಿ ಹೊಂದಿರುವ ನಮೋ ಸರ್ಕಾರ ಮಿಷನ್ ಮೋಡ್ ನೇಮಕಾತಿಗೆ ಸೂಚನೆ ನೀಡಿದೆ.
* ನಿರುದ್ಯೋಗ ಸಮಸ್ಯೆ ಭಾರತವನ್ನು ಸಾಕಷ್ಟು ಬಾಧಿಸುತ್ತಿದೆ. ಕೋವಿಡ್ ಬಳಿಕ ಈ ಸಮಸ್ಯೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ.
* ಯುವಕರು ಕೆಲಸ ಇಲ್ಲದೇ ಪರಿತಪಿಸುತ್ತಿದ್ದಾರೆ. ಈ ನಿರುದ್ಯೋಗ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿವೆ.
* ದೇಶದಲ್ಲಿ ಮುಂದಿನ 18 ತಿಂಗಳು ಅಂದರೆ 2023ರ ವೇಳೆಗೆ 10 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ.
* ಇದಕ್ಕೆ ಪೂರಕ ಎನ್ನುವಂತೆ ಇಂದು 75 ಸಾವಿರ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರವನ್ನು ಹಂಚಿಕೆ ಮಾಡಿದರು.
* ಈ ವೇಳೆ ಮಾತನಾಡಿದ ಅವರು, ಗ್ರೂಪ್ ಎ ಮತ್ತು ಬಿ (ಗೆಜೆಟೆಡ್), ಗ್ರೂಪ್ ಬಿ (ನಾನ್ ಗೆಜೆಟೆಡ್) ಮತ್ತು ಸಿ ಗುಂಪಿನಲ್ಲಿ ವಿವಿಧ ಹಂತಗಳಲ್ಲಿ ವಿಂಗಡಿಸಲಾಗಿದೆ.
* ಅವರನ್ನು ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್‌ಗಳು, ಕಾನ್ಸ್‌ಟೇಬಲ್‍ಗಳು, ಎಲ್‍ಡಿಸಿಗಳು, ಸ್ಟೆನೋಗ್ರಾಫರ್‌ಗಳು, ಪಿಎಗಳು, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಹುದ್ದೆಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
* 8 ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದೆ, ಇವುಗಳಿಗೆ ತ್ವರಿತವಾಗಿ ನೇಮಕಾತಿ ಮಾಡಲಾಗುವುದು. ಸರ್ಕಾರಿ ಉದ್ಯೋಗಗಳು ಮಾತ್ರವಲ್ಲದೇ ಸ್ಕಿಲ್ ಇಂಡಿಯಾ ಮೂಲಕ ಯುವಕರನ್ನು ಸದೃಢ ಮಾಡಲಾಗುತ್ತಿದೆ.
* 8 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಸರ್ಕಾರದ ನೆರವು ಪಡೆದು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ ಎಂದರು.
* ಕೊರೊನಾ ನಂತರ ವಿಶ್ವಾದ್ಯಂತ ಹಲವಾರು ದೇಶಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಹೊಡೆತವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
* ಯುವಜನರಿಗೆ ಗರಿಷ್ಠ ಉದ್ಯೋಗವಕಾಶವನ್ನು ಸೃಷ್ಟಿಸಲು ಕೇಂದ್ರವು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Previous Articleಏಷ್ಯಾದ ಅತಿದೊಡ್ಡ ಸಂಕುಚಿತ ಜೈವಿಕ ಅನಿಲ ಸ್ಥಾವರ ಪ್ರಾರಂಭ