ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ ಹುದ್ದೆಗಳ ನಿರೀಕ್ಷೆಯಲ್ಲಿದ್ದ, ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ 2000 ಚಾಲಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚಾಲಕರಿಗೆ ಈವರೆಗೆ ತರಬೇತಿ ಅವಧಿಯಲ್ಲಿ 10 ಸಾವಿರ ರೂ ನೀಡಲಾಗುತ್ತಿತ್ತು, ಆ ಮೊತ್ತವನ್ನು ಈಗ 20 ಸಾವಿರ ರೂಗಳಿಗೆ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.
* ಈ ಕುರಿತು ಸಾರಿಗೆ ಸಚಿವ ಶ್ರೀರಾಮಲು ಅವರು ಕೂಡ ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.