ಹಲವು ವರ್ಷಗಳಿಂದ ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದ, ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಪಿಯು ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದು, ಒಟ್ಟು 4,259 ಉಪನ್ಯಾಸಕರ ಹುದ್ದೆಗಳು ಭರ್ತಿಯಾಗಬೇಕಿದ್ದು, ಪ್ರಸ್ತುತ 824 ಹುದ್ದೆಗಳ ನೇಮಕಾತಿಗೆ ಗುರುತಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 36 ಹುದ್ದೆಗಳು, ಹಾಗೂ ಕರ್ನಾಟಕೇತರ ಪ್ರದೇಶಕ್ಕೆ 776 ಹುದ್ದೆಗಳನ್ನು ಗುರುತಿಸಲಾಗಿದೆ.
ಹುದ್ದೆಗಳ ವಿವರ : 824
– ಅರ್ಥಶಾಸ್ತ್ರ ಉಪನ್ಯಾಸಕರು – 184
– ಇಂಗ್ಲಿಷ್ – 125
– ಇತಿಹಾಸ – 124
– ಕನ್ನಡ – 105
– ವಾಣಿಜ್ಯಶಾಸ್ತ್ರ – 100
– ರಾಜ್ಯಶಾಸ್ತ್ರ – 79
– ಸಮಾಜಶಾಸ್ತ್ರ – 79
– ಭೂಗೋಳಶಾಸ್ತ್ರ – 20
– ಮನಃ ಶಾಸ್ತ್ರ – 02
– ಕಂಪ್ಯೂಟರ್ ಸೈನ್ಸ್ – 06
* ಈ ಕುರಿತು ಮಾನ್ಯ ಶಿಕ್ಷಣ ಸಚಿವರು ಕೂಡ ಅಧಿಕೃತವಾಗಿ ತಿಳಿಸಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.