ವಿಜಯಪುರ ಜಿಲ್ಲೆಯ ಪ್ರಮುಖ ಖಾಸಗಿ ಸಹಕಾರಿ ಬ್ಯಾಂಕ್ ಆಗಿರುವ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿ., ಬಸವನಬಾಗೇವಾಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : 08
ಕಿರಿಯ ಸಹಾಯಕ/ ಕಂಪ್ಯೂಟರ್ ಪ್ರೋಗ್ರಾಮರ್ – 03
ಸಿಪಾಯಿ/ ಕಾವಲುಗಾರ – 05
No. of posts: 8
Application Start Date: 19 ಸೆಪ್ಟೆಂಬರ್ 2023
Application End Date: 7 ಅಕ್ಟೋಬರ್ 2023
Work Location: ಬಸವನಬಾಗೇವಾಡಿ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
ಕಿರಿಯ ಸಹಾಯಕ/ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆB.COM / M.COM / BCA/ MCA/ ಸ್ನಾತಕೋತ್ತರ ಪದವಿ/ ಪದವಿ ವಿದ್ಯಾರ್ಹತೆಯನ್ನು ಹಾಗೂ
ಸಿಪಾಯಿ/ ಕಾವಲುಗಾರ ಹುದ್ದೆಗಳಿಗೆ SSLC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.
Fee:
– ಕಿರಿಯ ಸಹಾಯಕ/ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳು 1000/- ರೂ ಅರ್ಜಿ ಶುಲ್ಕ ಹಾಗೂ SC/ST ಅಭ್ಯರ್ಥಿಗಳು 500/- ರೂ ಅರ್ಜಿ ಶುಲ್ಕ ಪಾವತಿಸಬೇಕು.
– ಸಿಪಾಯಿ/ ಕಾವಲುಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳು 500/- ರೂ ಅರ್ಜಿ ಶುಲ್ಕ ಹಾಗೂ SC/ST ಅಭ್ಯರ್ಥಿಗಳು 250/- ರೂ ಅರ್ಜಿ ಶುಲ್ಕ ಪಾವತಿಸಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು
ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : 40 ವರ್ಷ
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 38 ವರ್ಷ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.
Pay Scale:
ಅಭ್ಯರ್ಥಿಗಳಿಗೆ ಹುದ್ದೆಗಳಿಗೆ 27,650/- ರೂಗಳಿಂದ 52,650/- ರೂ ಗಳವರೆಗೆ ಮಾಸಿಕ ವೇತನವನ್ನು ನೀಡಲಾಗುವುದು.