ಭಾರತೀಯ ನೌಕಾಪಡೆಯಲ್ಲಿ ಅಗ್ನಿ ವೀರರ ಎಂಆರ್ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 17/12/ 2022 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 100
ಪುರುಷ ಅಭ್ಯರ್ಥಿಗಳಿಗಾಗಿ – 80
ಮಹಿಳಾ ಅಭ್ಯರ್ಥಿಗಳಿಗಾಗಿ – 20
No. of posts: 100
Application Start Date: 5 ಡಿಸೆಂಬರ್ 2022
Application End Date: 17 ಡಿಸೆಂಬರ್ 2022
Work Location: ಭಾರತದಾದ್ಯಂತ
Selection Procedure:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSLC/ PUC/ Diploma/ ಪದವಿ ವಿದ್ಯಾರ್ಹತೆಯನ್ನು ಕನಿಷ್ಠ ಶೇ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.
– ಈ ಕುರಿತು ಸವಿವರವಾದ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
Fee:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ 550/- ರೂ ಅರ್ಜಿ ಶುಲ್ಕವನ್ನು ಜೊತೆಗೆ 18% ಜಿಎಸ್ ಟಿ ಯನ್ನು ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ಪಾವತಿಸಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 01 ಮೇ 2002 ರಿಂದ 31 ಅಕ್ಟೋಬರ್ 2005 ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 30,000 /- ರಿಂದ 40,000 /- ರೂ ವೇತನವನ್ನು ನಿಗದಿಪಡಿಸಗುತ್ತದೆ.
ನಾಲ್ಕು ವರ್ಷಗಳ ನಂತರ ಸೇವಾನಿಧಿ ಪ್ಯಾಕೇಜ್ ಆಗಿ 11.71 ಲಕ್ಷ ರೂ ವನ್ನು ಕೊಡಲಾಗುತ್ತದೆ. ಜೊತೆಗೆ ಪ್ರಯಾಣ ಮತ್ತು ಇತರೆ ಭತ್ಯೆಯನ್ನು ಪಾವತಿಸಲಾಗುವದು.