ಕರ್ನಾಟಕ ಲೋಕಸೇವಾ ಆಯೋಗವು 26-02-2023 ರಂದು ನಡೆಸಿದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಪತ್ರಿಕೆ-1 (ವಿಷಯ ಸಂಕೇತ – 497) ಮತ್ತು ನಿರ್ಧಿಷ್ಟ ಪತ್ರಿಕೆ-2 (ವಿಷಯ ಸಂಕೇತ – 498) ಸದರಿ ಕೀ ಉತ್ತರಗಳನ್ನು ಆಯೋಗವು ಪ್ರಕಟಿಸಿದೆ.
* ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಕೀ ಉತ್ತರಗಳನ್ನು ಗಮನಿಸಬಹುದಾಗಿದೆ.
* ಅಭ್ಯರ್ಥಿಗಳಿಗೆ ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು 6 ಮಾರ್ಚ್ 2023 ಸಾಯಂಕಾಲ 05:30 ರೊಳಗಾಗಿ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪಿಸಬಹುದಾಗಿದೆ.
ವಿಳಾಸ : ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗಸೌಧ, ಬೆಂಗಳೂರು – 560001