* ನವೆಂಬರ್ 13 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ 2022 (T20 World Cup 2022) ಫೈನಲ್ ಕಾದಾಟದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ (ENG vs PAK) ತಂಡಗಳು ಇದ್ದವು.
* ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ದಾಖಲಿಸುವ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿದೆ.
* ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ (Pakistan) ತಂಡವು 137 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ (England) ತಂಡ ನಿಗದಿತ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್ 2022 ಗೆ ಚಾಂಪಿಯನ್ ಆಯಿತು.
* ಪಾಕಿಸ್ತಾನ ನೀಡದ 138 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೂ ಸಹ ಆರಂಭಿಕ ಆಘಾತ ಉಂಟಾಯಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಅಲೇಕ್ಸ್ ಹೇಲ್ಸ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ನಾಯಕ ಜೋಸ್ ಬಟ್ಲರ್ 26 ರನ್ ಗಳಿಸಿ ಔಟ್ ಆಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಆಯಿತು.
* ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ 49 ಎಸೆತದಲ್ಲಿ 1 ಸಿಕ್ಸ್ 5 ಪೋರ್ಗಳ ಮೂಲಕ 52 ರನ್ ಗಳಿಸಿ ತಂಡದ ಗೆಲುವಿನಲ್ಲಿ ಹೀರೋ ಆಗಿ ಹೊರಹೊಮ್ಮಿದರು. ನಂತರ ಫಿಲ್ ಸಾಲ್ಟ್ 10 ರನ್, ಹ್ಯಾರಿ ಬ್ರೋಕ್ 20 ರನ್, ಮೋಯಿನ್ ಅಲಿ 19 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
* ಒಂದು ಹಂತದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿತ್ತು. ಆದರೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆಮಗ್ಲರಿಗೆ 2 ನೇ ಬಾರಿಗೆ ವಿಶ್ವಕಪ್ ಒಲಿಯಿತು.
* ಏಕದಿನ ವಿಶ್ವಕಪ್ನಲ್ಲಿ ಕೊನೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿದ ರೀತಿಯಲ್ಲಿ ಈ ಬಾರಿಯೀ ಸ್ಟೋಕ್ಸ್ ಏಕಾಂಗಿಯಾಗಿ ನಿಂತು ತಂಡವನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಆಂಗ್ಲರ ಪರ ಹೀರೋ ಆಗಿ ಮಿಂಚಿದರು.
* ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
* ಪಾಕಿಸ್ತಾನ ಪರ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬೇಗ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರೆ, ಆಂಗ್ಲರ ದಾಳಿಗೆ ಪಾಕ್ ತತ್ತರಿಸಿ ಹೋಯಿತು.
* ಪಾಖ್ ಪರ ಮೊಹಮ್ಮದ್ ರಿಜ್ವಾನ್ 15 ರನ್, ಬಾಬರ್ ಅಜಮ್ 32 ರನ್, ಮೊಹಮ್ಮದ್ ಹ್ಯಾರಿಸ್ 8 ರನ್, ಶಾನ್ ಮಸೂದ್ 38 ರನ್, ಇಫ್ತಿಕರ್ ಅಹ್ಮದ್ ಶೂನ್ಯ, ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್, ಮೊಹಮ್ಮದ್ ವಾಸಿಂ 4 ರನ್, ಶಾಹೀನ್ ಶಾ ಆಫ್ರಿದಿ 5 ರನ್ ಮತ್ತು ಹ್ಯಾರಿಸ್ ರೌಫ್ 1 ರನ್ ಗಳಿಸಿ ಔಟಾಗದೇ ಉಳಿದರು.
* ಭಾರತದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ – 296
* ಶ್ರೀಲಂಕಾದ ವನಿಂದು ಹಸರಗಂಗಾ ಇವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರು.
* ಭಾರತ ತಂಡದ ಸೂರ್ಯಕುಮಾರ ಯಾದವ್ ಟೂರ್ನಿಯಲ್ಲಿ ಮಾಡಿದ ಸ್ಟ್ರೈಕ್ ರೇಟ್
* ವಿಜೇತ ತಂಡಕ್ಕೆ 13.25 ಕೋಟಿ ವಿಜೇತ ತಂಡಕ್ಕೆ ಲಭಿಸಿದ ನಗದು ಬಹುಮಾನವಾಗಿದೆ.
* 2 ನೇ ಸಲ ಇಂಗ್ಲೆಂಡ್ ಜಯಿಸಿದ ಟಿ 20 ವಿಶ್ವಕಪ್ ಗಳು. ವೆಸ್ಟ್ ಇಂಡೀಸ್ ದಾಖಲೆಯನ್ನು ಸರಿಗಟ್ಟಿದೆ.
* ಟಿ 20 ವಿಶ್ವಕಪ್ ಗಳಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಿವೆ.
* ಟಿ 20 ವಿಶ್ವಕಪ್ ನಲ್ಲಿ 45 ಬಾರಿ ಪಂದ್ಯಗಳು ಆಯೋಜನೆ ಗೊಂಡಿವೆ.
* ಇಂಗ್ಲೆಂಡ್ ನ ಎಡಗೈ ವೇಗಿ ಸ್ಯಾಮ್ ಕರನ್ ಟಿ 20 ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Previous ArticleGoogle ನ 1,000 ಭಾಷೆಯ AI ಮಾದರಿ