ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸೆಪ್ಟೆಂಬರ್ 11 ರಂದು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲಾಗುತ್ತದೆ.
ಕೇಂದ್ರ ಸರ್ಕಾರವು 2013 ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವು ಪ್ರತಿ ವರ್ಷ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ ಎಂದು ಘೋಷಿಸಿತು.
ಭಾರತದಲ್ಲಿರುವ ಅರಣ್ಯಗಳು ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರರ ತ್ಯಾಗವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿದೆ.
ಅರಣ್ಯ ರಕ್ಷಣಾ ಸಿಬ್ಬಂದಿ ಪಿ.ಶ್ರೀ ನಿವಾಸ್ ಅವರ ಸ್ಮರಣಾರ್ಥವಾಗಿ ಮೊದಲಿಗೆ ಕರ್ನಾಟಕ ಪ್ರತಿ ವರ್ಷ ನವೆಂಬರ್ 11 ರಂದು ಅರಣ್ಯ ಹುತಾತ್ಮರ ದಿನವನ್ನು ಆಚರಿಸಲು ಆರಂಬಿಸಲಾಯಿತ್ತು.
1730 ರ ಸೆಪ್ಟೆಂಬರ್ 11ರಂದು ನಡೆದಿದ್ದ ಖೇಜರ್ಲಿ ಹತ್ಯಾಕಾಂಡದ ಸ್ಮರಣಾರ್ಥ ಆ ದಿನವನ್ನು ನಿಗದಿ ಮಾಡಲಾಗಿದೆ, ರಾಜಸ್ಥಾನದ ಮಹಾರಾಜ ಅಭಯ್ ಸಿಂಗ್ ಎಂಬಾತ ಖೇಜರ್ಲಿ(ಜಾಲಿ ಮರದ ಜಾತಿಗೆ ಸೇರಿದ್ದು) ಮರಗಳನ್ನು ಕಡಿಯಲು ಆದೇಶಿಸುತ್ತಾನೆ, ರಾಜಸ್ಥಾನದ ಖೇಜರ್ಲಿ ಎಂಬ ಗ್ರಾಮದ ಬಿಷ್ಣೋಯಿ ಸಮುದಾಯದ ಜನರು ಈ ಮರವನ್ನು ಪೂಜಿಸುತ್ತಿದ್ದರು, ರಾಜನ ನಿರ್ಧಾರವನ್ನು ವಿರೋಧಿಸಿ ಸಮುದಾಯದ ಅಮೃತದೇವಿ ಎಂಬ ಮಹಿಳೆ ಮರವನ್ನು ಕಡಿಯುವ ಬದಲಿಗೆ ತನ್ನ ತಲೆ ಕೆಡೆಯುವಂತೆ ಹೇಳುತ್ತಾಳೆ, ರಾಜ ತನ್ನ ಸೇನೆಯ ಮೂಲಕ ಆಕೆಯ ಹಾಗೂ ಅವಳ ಮೂರು ಪುತ್ರಿಯರ ತಲೆ ಕಡಿಸುತ್ತಾನೇ, ಈ ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ, ಮರ ಕಡಿಯಲು ವಿರೋಧ ವ್ಯಕ್ತಪಡಿಸಿದ್ದ 359 ಜನರನ್ನು ಸೇನಾ ಸಿಬ್ಬಂದಿ ಹತ್ಯ ಮಾಡುತ್ತಾರೆ, ಈ ವಿಷಯ ತಿಳಿದ ರಾಜ ಮರ ಕಡಿಯುವುದನ್ನು ಸ್ಥಗಿತಗೊಳಿಸಿ ಮರ ಕಡಿಯದಂತೆ ಆದೇಶ ಹೊರಡಿಸುತ್ತಾನೆ. ಇದರ ಸ್ಮರಣಾರ್ಥ ಸೆಪ್ಟಂಬರ್ 11ರಂದು ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.