ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
2023 ಸೆಪ್ಟೆಂಬರ್ 27 ವಿಶ್ವ ಪ್ರವಾಸೋದ್ಯಮ ದಿನದ ಥೀಮ್ ಪ್ರವಾಸೋದ್ಯಮ ಮತ್ತು ಹಸಿರಿನ ಮೇಲೆ ಹೂಡಿಕೆ (tourism and green investments) ಎಂಬುವುದಾಗಿದೆ.
ಕಳೆದ ಆರು ದಶಕಗಳಿಂದ ಪ್ರವಾಸೋದ್ಯಮ ಕ್ಷೇತ್ರವು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ವಲಯವಾಗಿ ಪರಿಣಮಿಸಿದೆ.
ಈ ಕ್ಷೇತ್ರವು ಜಗತ್ತಿನ ಜಿಡಿಪಿಗೆ ಅಂದಾಜು ಶೇ.7.6ರಷ್ಟು ಕಾಣಿಕೆ ನೀಡುತ್ತಿದೆ.
1979 ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ವರ್ಡ್ ಟೂರಿಸಂ ಆರ್ಗನೈಜೇಷನ್ (UNWTO) ಶಾಸನಗಳನ್ನು ಅಂಗೀಕರಿಸಿತ್ತು.
1980 ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಗಳನ್ನು ಅಂಗೀಕರಿಸಿತು ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ ಏಕೆಂದರೆ ಈ (ಸೆಪ್ಟೆಂಬರ್ 27) ದಿನಾಂಕವು UNWTO ನ ಶಾಸನಗಳನ್ನು ಅಳವಡಿಸಿಕೊಂಡ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.