* ಕಳೆದ ವರ್ಷ “ಮಾತಾಡ್ ಮಾತಾಡ್ ಕನ್ನಡ” ಎಂಬ ಘೋಷವಾಕ್ಯದೊಂದಿಗೆ ಜರುಗಿದ್ದ ಕಾರ್ಯಕ್ರಮವು ಯಶಸ್ವಿಯಾಗಿತ್ತು. ಹಾಗಾಗಿ ಅಕ್ಟೋಬರ್ 28 ರಂದು ಕನ್ನಡದಲ್ಲಿ ಏಕಕಾಲದಲ್ಲಿ ರಾಜ್ಯಾದ್ಯಂತ ಕನ್ನಡ ಕವಿಗಳ ಜನಪ್ರಿಯತೆ ಗೀತೆಗಳ ಕೋಟಿ ಕಂಠ ಗಾಯನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಮ್ಮಿಕೊಂಡಿದ್ದಾರೆ.
* ರಾಜ್ಯೋತ್ಸವ ಪ್ರಯುಕ್ತವಾಗಿ ಈ ಕಾರ್ಯಕ್ರಮವನ್ನು ಮಾಡಲಾಗಿದೆ, ಹಾಗಾಗಿ ಕರ್ನಾಟಕದ ಜನತೆ ಅಲ್ಲದೆ ಅನಿವಾಸಿ ಕನ್ನಡಿಗರು, ಹೊರನಾಡು ಮತ್ತು ಗಡಿನಾಡು ಕನ್ನಡಿಗರು ಎಲ್ಲರೂ ಕೂಡ ಭಾಗವಹಿಸಲಿದ್ದಾರೆ.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಅವರು ಈ ಕಾರ್ಯಕ್ರಮವನ್ನು ಕುರಿತು – “ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ರಮ ಇದಾಗಿದೆ” ಎಂದು ಹೇಳಿದ್ದಾರೆ.
* ಈ ಕಾರ್ಯಕ್ರಮದಲ್ಲಿ ಈ ಬಾರಿ ಒಟ್ಟು 5 ಗೀತೆಗಳನ್ನು ಆಯ್ಕೆ ಮಾಡಲಾಗಿದೆ.
1 ಕುವೆಂಪು ಅವರ – ಜೈ ಭಾರತ ಜನನಿಯ ತನುಜಾತೆ
2 ಕುವೆಂಪು ಅವರ ಮತ್ತೊಂದು ಗೀತೆ – ಬಾರಿಸು ಕನ್ನಡ ಡಿಂಡಿಮವ
3 ಚನ್ನವೀರ ಕಣವಿ ಅವರ – ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ
4 ಡಿ ಡಿ ಎಸ್ ಕರ್ಕಿ ಅವರ – ಹಚ್ಚೇವು ಕನ್ನಡದ ದೀಪ
5 ಹಂಸಲೇಖ ಅವರ – ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
* ಈ ಕಾರ್ಯಕ್ರಮವು ಎಲ್ಲ ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ,ಕಡಲ ತೀರ, ಪ್ರವಾಸಿ ಸ್ಥಳಗಳು, ಕೋಟೆಗಳು, ಕಂಪನಿಗಳು, ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ, ಗಾಂಧಿ ಪ್ರತಿಮೆ ಎದುರು ಹಾಗೂ ರೈಲು-ಬಸ್ ನಿಲ್ದಾಣಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದಿದ್ದಾರೆ.