* ಕೈವಲ್ಯ ತ್ರಿವಿಕ್ರಮ್ ಪರ್ ನಾಯಕ್, ಲಕ್ಷ್ಮಣ ಪ್ರಸಾದ್ ಆಚಾರ್ಯ, ಸಿ.ಪಿ. ರಾಧಾಕೃಷ್ಣ, ಗುಲಾಬ್ ಚಂದ್ ಕಟಾರಿಯಾ, ಶಿವಪ್ರತಾಪ್ ಶುಕ್ಲಾ, ಕನ್ನಡಿಗ ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಯಾದ ಎಸ್. ಅಬ್ದುಲ್ ನಜೀರ್ ಸಹಿತ ಆರು ಜನರನ್ನುರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ.
* ಆಂಧ್ರ ಪ್ರದೇಶಕ್ಕೆ ಸೈಯದ್ ಅಬ್ದುಲ್ ನಜೀರ್ ಅವರು ರಾಜ್ಯಪಾಲರಾಗಿ ನೇಮಕ ಗೊಂಡಿದ್ದಾರೆ.
* ನಿವೃತ್ತ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ ನಾಯಕ್ ಅವರನ್ನು ಅರುಣಾಚಲಪ್ರದೇಶಕ್ಕೆ ನೇಮಕ ಮಾಡಲಾಗಿದೆ.
* ಬಿಜೆಪಿ ಮುಖಂಡರಾದ ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರು ಸಿಕ್ಕಿಂ ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಗೊಂಡಿದ್ದಾರೆ.
* ಹಾಗೂ ಸಿ.ಪಿ. ರಾಧಾಕೃಷ್ಣ, ಶಿವಪ್ರತಾಪ್ ಶುಕ್ಲಾ ಮತ್ತು ಗುಲಾಬ್ ಚಂದ್ ಕಟಾರಿಯಾ ಅವರನ್ನು ಕ್ರಮವಾಗಿ ಜಾರ್ಖಂಡ್ ,ಹಿಮಾಚಲ ಪ್ರದೇಶ ,ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕಮಾಡಲಾಗಿದೆ.