ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್ ಪೇರೆಂಟ್ಸ್ ಬ್ಯಾಗ್ ಸ್ಟೋರೀಸ್‌ಗೆ ಬಾಲ ಸಾಹಿತ್ಯ ಪುರಸ್ಕಾರ ಸಿಕ್ಕಿದೆ.
2023ನೇ ಸಾಲಿನ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ವಿಜಯಶ್ರೀ ಹಾಲಾಡಿ ಹಾಗೂ ಯುವಸಾಹಿತ್ಯ ಪುರಸ್ಕಾರಕ್ಕೆ ಮಂಜು ನಾಯಕ್ ಚೆಲ್ಲೂರು ಅವರು ಭಾಜನರಾಗಿದ್ದಾರೆ
ವಿಜಯಶ್ರೀ ಅವರ “ಸೂರಕ್ಕಿ ಗೇಟ್” ಕಾದಂಬರಿಗೆ ಪ್ರಶಸ್ತಿ ದೊರೆತ್ತಿದ್ದರೆ,
ಮಂಜು ನಾಯಕ್ ಚೆಲ್ಲೂರು ಅವರ “ಪೂ ಮತ್ತು ಇತರೆ ಕಥೆಗಳು’ ಎನ್ನುವ ಸಣ್ಣ ಕಥಾಸಂಗ್ರಹಕ್ಕೆ ಪುರಸ್ಕಾರ ದೊರೆತಿದೆ.
ಬಾಲಸಾಹಿತ್ಯ ಪುರಸ್ಕಾರದ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಜಯಶ್ರೀ ಸಿ. ಕಂಬಾರ್, ಡಾ| ಆನಂದ್ ವಿ.ಪಾಟೀಲ್ ಹಾಗೂ ಡಾ| ಮೂಡ್ನಾಕೂಡು ಚಿನ್ನಸ್ವಾಮಿ ಅವರು ಭಾಗವಹಿಸಿದ್ದರು. ಇನ್ನು ಯುವ ಪುರಸ್ಕಾರ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಎಚ್.ಎಸ್.ರಾಘವೇಂದ್ರ ರಾವ್, ಡಾ| ಕೆ.ಮರುಳಸಿದ್ದಪ್ಪ ಹಾಗೂ ಶ್ರೀಮತಿ ಎಂ.ಆರ್.ಕಮಲಾ ಅವರು ಭಾಗವಹಿಸಿದ್ದರು.