* ಜಿ20 ಅಥವಾ ಗ್ರೂಪ್ ಆಫ್ 20 (20 ರಾಷ್ಟ್ರಗಳ ಸಮೂಹ) ಒಳಗೊಂಡಿರುವಂತಹ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಈ ಸಂಘಟನೆಯು ಅಂತಾರಾಷ್ಟ್ರೀಯ ಹಣಕಾಸು ಸುಸ್ಥಿರತೆ, ವಾತಾವರಣ ಬದಲಾವಣೆ ಉಪಶಮನ ಹಾಗೂ ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
* ಜಿ20 ಸದಸ್ಯ ರಾಷ್ಟ್ರಗಳು ವಿಶ್ವದ ಒಟ್ಟು ಜಿಡಿಪಿಯ ಪೈಕಿ ಶೇಕಡಾ 80 ರಷ್ಟು ಪಾಲನ್ನು ಹೊಂದಿದ್ದು, ಶೇಕಡಾ 75 ರಷ್ಟು ಅಂತರಾಷ್ಟ್ರಿಯ ವ್ಯಾಪಾರ ಹಾಗೂ ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡಾ 60 ರಷ್ಟು ಪಾಲನ್ನು ಹೊಂದಿದೆ.
* ಭಾರತವು ಡಿಸೇಂಬರ್ 1, 2022 ರಿಂದ ಒಂದು ವರ್ಷದ ಅವಧಿಯವರೆಗೆ ಜಿ20 ಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಜಾಗತಿಕ ಆರ್ಥಿಕ ಸಂಪತ್ತು ಹಾಗೂ ಸಮೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ 200 ಕ್ಕೂ ಹೆಚ್ಚಿನ ಸಂಖ್ಯೆಯ ಸಭೆಗಳನ್ನು ನಡೆಸಲಿದೆ.
* ಡಿಸೇಂಬರ್ 13 ರಿಂದ 15 ರವರೆಗೆ ಹಣಕಾಸು ಹಾಗೂ ಕೇಂದ್ರ ಬ್ಯಾಂಕ್ ಪ್ರತಿನಿಧಿಗಳ ಸಭೆ ನಡೆಯಲಿದೆ.
* ಡಿಸೇಂಬರ್ 16 ರಿಂದ 17 ರವರೆಗೆ ನಿಯಮಾವಳಿ ರೂಪಿಸುವ ಕಾರ್ಯಕಾರಿ ಗುಂಪಿನ ಸಭೆ ನಡೆಯಲಿದೆ.
* ಭಾರತದಲ್ಲಿ ಒಟ್ಟು 200 ಕ್ಕೂ ಹೆಚ್ಚು ಜಿ20 ಸಭೆಗಳು ನಡೆಯಲಿವೆ ಅದರಲ್ಲಿ ಕರ್ನಾಟಕದಲ್ಲಿ 14 ಸಭೆಗಳು ನಡೆಯಲಿವೆ.
* ದೆಹಲಿಯ ನಂತರ ಕರ್ನಾಟಕ ಅತಿ ಹೆಚ್ಚಿನ ಸಂಖ್ಯೆಯ ಜಿ20 ಸಭೆಗಳ ಆತಿಥ್ಯ ವಹಿಸಲಿದೆ.
* ಕರ್ನಾಟಕದ 14 ಸಭೆಗಳ ಪೈಕಿ ಬೆಂಗಳೂರಿನಲ್ಲಿ 11, ಹಂಪಿಯಲ್ಲಿ 2 ಹಾಗೂ ಮೈಸೂರಿನಲ್ಲಿ 1 ಸಭೆ ನಡೆಯಲಿದೆ.
Subscribe to Updates
Get the latest creative news from FooBar about art, design and business.
ಡಿಸೇಂಬರ್ 13 ರಿಂದ 17 ರವರೆಗೆ ಬೆಂಗಳೂರಿನಲ್ಲಿ ಜಿ20 ಸಭೆ ನಡೆಯಲಿದೆ
Previous Articleಕರ್ನಾಟಕ ಅಬಕಾರಿ ಇಲಾಖೆಯ 1100 ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ
Next Article ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ “ಸಂರಕ್ಷಣ್ ಯೋಜನೆ”