* ಮುಂಬೈ ಎಕ್ಸ್‌ಪ್ರೆಸ್ ವೇನ 270 ಕಿ.ಮೀ. ಉದ್ದದ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆ. 12 ರಂದು ಉದ್ಘಾಟಿಸಲಿದ್ದಾರೆ. ದೆಹಲಿ ಮತ್ತು ಮುಂಬೈ ನಡುವಣ ಪೂರ್ಣ ಹೆದ್ದಾರಿಯು ಸಿದ್ಧವಾದ ನಂತರ ಇದು ದೇಶದ ಅತ್ಯಂತ ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
* ಇದು ಎಂಟು ಲೇನ್‌ಗಳ ಹೆದ್ದಾರಿಯಾಗಿದ್ದು, ಭವಿಷ್ಯದಲ್ಲಿ 12 ಲೇನ್‌ಗಳಿಗೆ ವಿಸ್ತರಿಸಲು ಅಗತ್ಯವಾದಷ್ಟು ಭೂಮಿ ಇದೆ. ಲೇನ್‌ಗಳ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಅನುಕೂಲವಾಗುವಂತೆ ಎಕ್ಸ್‌ಪ್ರೆಸ್‌ವೇಯನ್ನು ವಿನ್ಯಾಸ ಮಾಡಲಾಗಿದೆ
* ಎಕ್ಸ್‌ಪ್ರೆಸ್‌ವೇ ಆರಂಭದಿಂದ ಕೊನೆಯವರೆಗೂ ಸಂಪೂರ್ಣವಾಗಿ ಸಿಗ್ನಲ್‌ಮುಕ್ತವಾಗಿದೆ. ಟೋಲ್ ಘಟಕಗಳ ಮೂಲಕವೇ ಎಕ್ಸ್‌ಪ್ರೆಸ್‌ವೇಗೆ ಪ್ರವೇಶ ಇರಲಿದೆ. ನೆಲಮಟ್ಟದಿಂದ ಹಲವು ಮೀಟರ್‌ಗಳಷ್ಟು ಎತ್ತರದಲ್ಲಿ ಹೆದ್ದಾರಿ ನಿರ್ಮಿಸಲಾಗಿದೆ.
– 1,458 ಕಿ.ಮೀ ಎಕ್ಸ್‌ಪ್ರೆಸ್‌ವೇ. ದೆಹಲಿ ಮುಂಬೈ ಮಧ್ಯೆ ಈಗ ಇರುವ ಹೆದ್ದಾರಿಯ ಉದ್ದ
– 1,386 ಕಿ.ಮೀ ಎಕ್ಸ್‌ಪ್ರೆಸ್‌ವೇ ದೆಹಲಿ-ಮುಂಬೈ ಮಧ್ಯೆ ಈಗ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರೆಸ್‌ವೇನ ಉದ್ದ
– 24-15 ಗಂಟೆ ನೂತನ ಎಕ್ಸ್‌ಪ್ರೆಸ್‌ವೇನಲ್ಲಿ ಈಗಿನ ಹೆದ್ದಾರಿಯಲ್ಲಿ ಎರಡೂ ನಗರಗಳ ನಡುವಣ ಪ್ರಯಾಣದ ಅವಧಿ
– 12 ಗಂಟೆ ನೂತನ ಎಕ್ಸ್‌ಪ್ರೆಸ್‌ವೇನಲ್ಲಿ ಎರಡೂ ನಗರಗಳ ನಡುವಣ ಪ್ರಯಾಣದ ಅವಧಿ
Subscribe to Updates
Get the latest creative news from FooBar about art, design and business.
Previous Articleನಿಸಾರ್ ಉಪಗ್ರಹ