* ಯುನೆಸ್ಕೋ (UNESCO)ದ ವಿಶ್ವ ಪರಂಪರೆ ವೀಕ್ಷಣಾಲಯಗಳ ಪಟ್ಟಿಗೆ ಬಿಹಾರದ ಮುಝಾಫರಪುರದಲ್ಲಿರುವ ಲಂಗತ್ ಸಿಂಗ್ ಕಾಲೇಜ್ ಆವರಣದಲ್ಲಿರುವ 106 ವರ್ಷದ ಖಗೋಳಶಾಸ್ತ್ರೀಯ ವೀಕ್ಷಣಾಲಯ ಸೇರಿದೆ.
* ಯುನೆಸ್ಕೋ (UNESCO) ಪಟ್ಟಿಯಲ್ಲಿ ಸ್ಥಾನ ಪಡೆದ ಪೂರ್ವ ಭಾರತದ ಮೊದಲ ವೀಕ್ಷಣಾಲಯ ಇದಾಗಿದೆ
* * ಇದರಿಂದ ವಿದ್ಯಾರ್ಥಿಗಳಿಗೆ ನೆರವು : –
* 1916 ರಲ್ಲಿ ಸ್ಥಾಪನೆಯಾಗಿರುವ ಈ ವೀಕ್ಷಣಾಲಯ ವಿದ್ಯಾರ್ಥಿಗಳಿಗೆ ವಿವರವಾದ ಖಗೋಳಶಾಸ್ತ್ರೀಯ ಮಾಹಿತಿಯನ್ನು ಒದಗಿಸುತ್ತದೆ
* ಕಾಲೇಜ್‌ನಲ್ಲಿ ಇದನ್ನು ಸ್ಥಾಪಿಸಲು ಉಪಕ್ರಮಿಸಿದವರು ಪ್ರೊಫೆಸರ್ ರಮೇಶ್ ಚಂದ್ರ ಸೇನ್ . ಮಾರ್ಗದರ್ಶನಕ್ಕಾಗಿ ಅವರು 1914 ರಲ್ಲಿ ಖಗೋಳಶಾಸ್ತ್ರಜ್ಞ ಜೆ . ಮಿಚೆಲ್ ಅವರೊಂದಿಗೆ ಸಮಾಲೋಚಿಸಿದ್ದರು.
* ದೂರದರ್ಶಕ, ಕಾಲಸೂಚಿ ಯಂತ್ರ, ಖಗೋಳಶಾಸ್ತ್ರೀಯ ಗಡಿಯಾರ ಮತ್ತಿತರ ಉಪಕರಣಗಳನ್ನು 1915 ರಲ್ಲಿ ಇಂಗ್ಲೆಂಡ್‌ನಿಂದ ಪಡೆಯಲಾಗಿತ್ತು.
* ಅಂತಿಮವಾಗಿ, 1916 ರಲ್ಲಿ ಈ ವೀಕ್ಷಣಾಲಯ ಆರಂಭವಾಗಿತ್ತು.
* 1946 ರಲ್ಲಿ ಕಾಲೇಜ್‌ನಲ್ಲಿ ತಾರಾಲಯ ( ಪ್ಲಾನೆಟೇರಿಯಂ ) ಸ್ಥಾಪಿಸಲಾಯಿತು.
* 1970 ರ ನಂತರ , ತಾರಾಲಯ ಮತ್ತು ಖಗೋಳಶಾಸ್ತ್ರೀಯ ವೀಕ್ಷಣಾಲಯದ ಪರಿಸ್ಥಿತಿ ಹದಗೆಡಲು ಆರಂಭವಾಯಿತು
Subscribe to Updates
Get the latest creative news from FooBar about art, design and business.