* ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳುವುದನ್ನು ಕಡ್ಡಾಯಗೊಳಿಸಿದೆ.
* ಮುಸ್ಲಿಂ ಸಮುದಾಯದವರು ವಂದೇ ಮಾತರಂ ಹೇಳುವದಿಲ್ಲ ಅದು ಅವರ ನಂಬಿಕೆಗೆ ವಿರುದ್ಧವಾಗಿದೆ, ಹಾಗಾಗಿ ಅವರು ಸಾರೆ ಜಹಾ ಸೆ ಅಚ್ಚಾ ಎಂದು ಹೇಳುತ್ತಾರೆ ಎಂದು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಬು ಅಸಿಂ ಆಜ್ಮಿ ಅವರು ಹೇಳಿದ್ದಾರೆ.
* ರೈತರಿಗೆ ಗೌರವ ಸೂಚಿಸುವ ಸಲುವಾಗಿ “ಜೈ ಕಿಸಾನ್ ” ಎಂದೂ, ಭ್ರಷ್ಟಾಚಾರ ಮುಕ್ತ ಸೇವೆ ಒದಗಿಸುವ ಎಲ್ಲ ನೌಕರರು “ಜೈ ಸೇವಾ ” ಎಂದೂ ಕರೆಯಲ್ಲಿ ಮಾತನಾಡಬೇಕೆಂದು ಶಿವಸೇನಾ ವಕ್ತಾರ್ ಕಿಶೋರ್ ತಿವಾರಿ ಹೇಳಿದ್ದಾರೆ.
* ವಂದೇ ಮಾತರಂ ಹೇಳುವಾಗ ಎಲ್ಲರ ಮನಸಲ್ಲಿ ದೇಶಪ್ರೇಮದ ಭಾವ ಮೂಡಬೇಕು ಅದು ನೌಕರರಿಗೆ ಬಲವಂತ ಪಡಿಸುವದು ಸರಿಯಲ್ಲ ಹಾಗೂ ಅವರ ವಯಕ್ತಿಕ ಫೋನ್ ಗೆ ಕರೆ ಬಂದಾಗ ವಂದೇ ಮಾತರಂ ಹೇಳಬೇಕೇಕೆನ್ದು ಕಡ್ಡಾಯಗೊಳಿಸುವದು ಇದು ಅಭಿವ್ಯಕ್ತಿ ಸ್ವತಂತ್ರದ ಹರಣ ಎಂದು ಏನ್ ಸಿಪಿ ವಕ್ತಾರ್ ಕ್ಲೈಡ್ ಕ್ರಾಸ್ಟೋ ಹೇಳಿದ್ದಾರೆ.
* ಸರ್ಕಾರವು ಇನ್ನು ಮುಂದೆ ಹಲೋ ಬದಲು ವಂದೇ ಮಾತರಂ ಎಂದು ಹೇಳಬೇಕೆಂದು ಮನವಿ ಮಾಡಿಕೊಂಡಿದೆ. ಸ್ವಾತಂತ್ಯದ ಘೋಷ ವಾಕ್ಯ ವಂದೇ ಮಾತರಂ ಆಗಿತ್ತು ಹಾಗೂ ಭಗತ್ ಸಿಂಗ್ ಅವರ ಕೊನೆಯ ಮಾತು ಕೂಡ ವಂದೇ ಮಾತರಂ ಆಗಿತ್ತು
Subscribe to Updates
Get the latest creative news from FooBar about art, design and business.
ಹಲೋ ಬದಲು ‘ವಂದೇ ಮಾತರಂ’ ಕಡ್ಡಾಯ : ಮಹಾರಾಷ್ಟ್ರ ಸರ್ಕಾರದಿಂದ ಆದೇಶ
Previous Articleಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಕರ್ನಾಟಕದ ಮೈಸೂರು 8 ನೇ ಸ್ವಚ್ಛ ನಗರ
Next Article ಸ್ವಚ್ಛ ಭರತ್ ಅಭಿಯಾನದಲ್ಲಿ ಕರ್ನಾಟಕಕ್ಕೆ 20 ನೇ ಸ್ಥಾನ