ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಜಯಪುರ ಘಟಕದಲ್ಲಿ ಖಾಲಿ ಇರುವ ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ ಸೇರಿದಂತ್ತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು
ಕೊನೆಯ ದಿನಾಂಕ 24/07/2022 ರಾತ್ರಿ 11:59 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: 27
* ಬೆರಳಚ್ಚು ನಕಲುಗಾರ : 1
*ಆದೇಶ ಜಾರಿಕಾರ : 6
* ಜವಾನ : 20
ಪ್ರಮುಖ ದಿನಾಂಕಗಳು :
– ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 25/06/2022
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/07/2022
– ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ : 26/07/2022
No. of posts: 027
Application Start Date: 25 ಜೂನ್ 2022
Application End Date: 24 ಜುಲೈ 2022
Last Date for Payment: 26 ಆಗಸ್ಟ್ 2022
Work Location: ವಿಜಯಪುರ ಜಿಲ್ಲಾ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು
* ಬೆರಳಚ್ಚುಗಾರ ಹುದ್ದೆಗೆ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ 1: 5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಜವಾನ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
* ಬೆರಳಚ್ಚು ನಕಲುಗಾರ ಹುದ್ದೆಗಳಿಗೆ – ಪಿ.ಯು.ಸಿ.(12th) ಅಥವಾ ಡಿಪ್ಲೋಮ (diploma) ವಿದ್ಯಾರ್ಹತೆಯನ್ನು ಹೊಂದಿರಬೇಕು.
* ಆದೇಶ ಜಾರಿಕಾರ, ಜವಾನ ಹುದ್ದೆಗಳಿಗೆ -ಎಸ್. ಎಸ್.ಎಲ್.ಸಿ(10th) ವಿದ್ಯಾರ್ಹತೆಯನ್ನು ಹೊಂದಿರಬೇಕು.ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು
*ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 200/- ಅರ್ಜಿ ಶುಲ್ಕ
* OBC ಅಭ್ಯರ್ಥಿಗಳು ರೂ. 100/- ಅರ್ಜಿ ಶುಲ್ಕ
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ವಿನಾಯಿತಿ ಇರುತ್ತದೆ.
Age Limit:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು
– ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 38 ವರ್ಷಗಳು ಹಾಗೂ
– SC ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವೇತನ ನೀಡಲಾಗುವುದು.
* ಬೆರಳಚ್ಚು ನಕಲುಗಾರ : 21,400/- ರಿಂದ 42,000/-
* ಆದೇಶ ಜಾರಿಕಾರ : 19,950/- ರಿಂದ 37,900/-
* ಜವಾನ : 17,000/- ರಿಂದ 28,950/-