* ನೀರಜ್ ಚೋಪ್ರಾ ಅವರು ಅಮೇರಿಕಾದ ಯೂಜೀನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ಭಾರತದ ಪರ ಆಡಲಿದ್ದಾರೆ ಇದರಿಂದ ಶತ ಕೋಟಿಗೂ ಅಧಿಕ ಜನರ ನಿರೀಕ್ಷೆಯ ಭಾರವನ್ನು ಇವರು ಹೊತ್ತುಕೊಂಡಿದ್ದಾರೆ.
* ಚೋಪ್ರಾ ರವರು ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನವನ್ನು ಜಯಿಸಿದ್ದಾರೆ ಭಾರತಕ್ಕೆ ಈ ಚಾಂಪಿಯನ್‌ಷಿಪ್ ನಲ್ಲಿ ಪದಕ ತಂದುಕೊಡುವುದು ಬಹುತೇಕ ಖಚಿತವಾಗಿದೆ ಏಕೆಂದರೆ ಈ ವರ್ಷದಲ್ಲಿ ಅವರು ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ ಇವರು ಎಲ್ಲ ಕೂಟದಲ್ಲೂ 90 ಮೀ ಸನಿಹದ ಪ್ರದರ್ಶನವನ್ನು ತೋರಿಸಿದ್ದಾರೆ.
* ನೀರಜ್ ಚೋಪ್ರಾ ಅವರು ಜೂನ್ ತಿಂಗಳಲ್ಲಿ ನಡೆದ ಫಿನ್ಲೆಂಡ್ ನಲ್ಲಿ ನಡೆದ ಪಾವೊ ನೊರ್ಮಿ ಕೂಟದಲ್ಲಿ ತಮ್ಮ ವೈಯಕ್ತಿಕ ಪ್ರದರ್ಶನ ನೀಡುವದರ ಜೊತೆಗೆ 89. 30 ಮೀ ಸಾಧನೆಯನ್ನು ಮಾಡಿದ್ದರು.
* ಇವರು ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ಸಾಧನೆ ಮೂಲಕ ತಮ್ಮ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.
* ಈ ಚಾಂಪಿಯನ್‌ಷಿಪ್ ನಲ್ಲಿ ಚೋಪ್ರಾ ರವರಿಗೆ ಗ್ರೆನಾಡದ ಅಂಡರ್ಸನ್ ಪೀಟರ್ಸ್ ಅವರು ಪೈಪೋಟಿ ನೀಡಲಿದ್ದಾರೆ ಹಾಗು ಹಾಲಿ ಚಾಂಪಿಯನ್ ಕೂಡಾ ಆಗಿರುವ ಪೀಟರ್ಸ್ ಈ ಋತುವಿನಲ್ಲಿ 93.07 ಮೀ ಸಾಧನೆಯನ್ನು ಮಾಡಿದ್ದರು.
* ಭಾರತದ ಪರ ಚೋಪ್ರಾ ಅವರನ್ನು ಹೊರತು ಪಡಿಸಿ ಲಾಂಗ್‌ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ ಭಾರತದ ಪರ ಅಲ್ಪ ಭರವಸೆಯನ್ನು ಮೂಡಿಸಿದ್ದಾರೆ ಇವರು ಏಪ್ರಿಲ್‌ನಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಇವರು 8 .36 ಮೀ ಸಾಧನೆಯನ್ನು ಮಾಡಿದ್ದರು.
* ಶ್ರೀಶಂಕರ್ ಅವರು ಈ ಋತುವಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳ ಸಾಧನೆಗೆ ಹೋಲಿಸಿದರೆ ಇವರು ಎರಡನೇ ಸ್ಥಾನದಲ್ಲಿದ್ದಾರೆ.
* ಭಾರತದ 23 ಸ್ಪರ್ಧಿಗಳು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
Subscribe to Updates
Get the latest creative news from FooBar about art, design and business.
ಇಂದಿನಿಂದ ʻವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ʼ ಆರಂಭ ನೀರಜ್ ಚೋಪ್ರಾ ಮೇಲೆ ಭಾರಿ ನಿರೀಕ್ಷೆ
Previous Articleಭಾರತದ ಕೇರಳ ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ