* ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಆತ್ಮಹತ್ಯೆ ತಡೆ ಸಂಸ್ಥೆ ಜಂಟಿಯಾಗಿ ಪ್ರತಿ ವರ್ಷ ಸೆಪ್ಟಂಬರ್ 10 ರಂದು “ವಿಶ್ವ ಆತ್ಮಹತ್ಯೆ ತಡೆ ದಿನ” ವನ್ನಾಗಿ 2003 ರಿಂದ ಆಚರಿಸುತ್ತ ಬಂದಿವೆ.
* 2021 ರಿಂದ 2023 ರವರೆಗೆ ಈ ದಿನಾಚರಣೆಯ ಧ್ಯೇಯವಾಕ್ಯ “ಕ್ರಿಯೆಯ ಮೂಲಕ ಭರವಸೆ ಮೂಡಿಸಿ” ಎಂಬುದಾಗಿರುತ್ತದೆ.
* * ಭೂಗೋಳಕ್ಕೆ ಸೈಕಲ್ ಸುತ್ತು :- ಅಂತರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿವರ್ಷ ಭೂಗೋಳಕ್ಕೆ ಸೈಕಲ್ ಸುತ್ತು ಎಂಬ ಅಭಿಯಾನವನ್ನು ನಡೆಸುತ್ತ ಬಂದಿದೆ.
* ಇನ್ನು ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ ಮಹಾರಾಷ್ಟ್ರವು ಮೊದಲನೇ ಸ್ಥಾನದಲ್ಲಿದ್ದು, ಇಲ್ಲಿ ಶೇಕಡಾ 13 ರಷ್ಟು ಪ್ರಕರಣಗಳು ವರದಿಯಾಗಿವೆ.
* ಇನ್ನು ಕ್ರಮವಾಗಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ಆತ್ಮಹತ್ಯೆ ವರದಿಯಾಗುವ ಐದು ರಾಜ್ಯಗಳ ಎನಿಸಿವೆ.
* ಒಟ್ಟು ಆತ್ಮಹತ್ಯೆಗಳಲ್ಲಿ ಕರ್ನಾಟಕದಲ್ಲಿ ವರದಿಯಾದ ಪ್ರಕರಣಗಳ ಪ್ರಮಾಣವು ಶೇಕಡ 8.15 ರಷ್ಟು ಇರುತ್ತದೆ, ಇನ್ನುಳಿದಂತೆ ಲಡಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಅತೀ ಕಡಿಮೆ (11) ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
* ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಹಾಗೂ ಇದರ ಇಪ್ಪತ್ತು ಪಟ್ಟು ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಾರೆ.